

ಪೆರಾಡಿ: ನೂತನವಾಗಿ ರಚನೆಯಾದ ಫ್ರೆಂಡ್ಸ್ ಕ್ಲಬ್ ನ ಉದ್ಘಾಟನಾ ಸಮಾರಂಭ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸ್ಥಳಿಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಫೆ. 7ರಂದು ನಡೆಯಿತು.
ಊರಿನ ಕೊಡುಗೆ ದಾನಿಯಾದ ದಯಾನಂದ ಬಂಗೇರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಗೂ ಎನ್. ಆರ್. ದಾಮೋದರ ಶರ್ಮಾ ಬಾರ್ಕೂರು ಕಾರ್ಯಕರ್ಮವನ್ನು ಉದ್ದೇಶಿಸಿ ಉಪನ್ಯಾಸ ಭಾಷಣ ಮಾಡಿದರು.

ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಸತೀಶಚಂದ್ರ ಸಾಲ್ಯಾನ್ ಹಾಗೂ ಊರಿನ ಕೊಡುಗೈ ದಾನಿ ದಯಾನಂದ ಬಂಗೇರ ಹಾಗೂ ಲತೀಪ್ ಸಿ.ಎ ಬ್ಯಾಂಕ್ ಪೆರಾಡಿ ಹಾಗೂ ಬೇಬಿ ದೇವಾಡಿಗ ಪೆರಾಡಿ ಇವರಿಗೆ ಫ್ರೆಂಡ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರತ್ನಾಕರ ಬುಣ್ಣನ್, ಕಿರಣ್ ಚಂದ್ರ ಡಿ. ಪುಷ್ಪಗಿರಿ, ಸತೀಶ್ಚಂದ್ರ ಸಾಲ್ಯಾನ್, ಸತೀಶ್ ಕೆ. ಕಾಶಿಪಟ್ಣ, ಜಯಂತ್ ಕೋಟ್ಯಾನ್, ಯಶೋಧರ ಆಚಾರ್ಯ, ಅಶೋಕ್ ಪಾಲಡ್ಕ, ಸುರೇಶ್ ಅಂಚನ್, ಜಗದೀಶ್ ಹೆಗ್ಡೆ, ಜಾನ್ಸನ್ ಡಿಸೋಜ ಅಶ್ವಥಪುರ, ರಂಜಿತ್ ಪಾರಿಜಾತ, ರಾಜೇಶ್ ಶೆಟ್ಟಿ, ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು.