ಉಜಿರೆ: ಸಂಚಾರಿ ಪೊಲೀಸ್ ಇಲಾಖೆ ಮತ್ತು ಮೋಟಾರ್ ಸಾರಿಗೆ ಇಲಾಖೆ ವತಿಯಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವ ಮತ್ತು ಕಾನೂನು ಪಾಲನೆ ಕುರಿತು ಜಂಜಾಗೃತಿ ಮೂಡಿಸುವ ಉದ್ದೇಶದಿಂದ ಜ. 29 ರಂದು ಉಜಿರೆ ಬಸ್ ನಿಲ್ದಾಣದಲ್ಲಿ ಹೆಲ್ಮೆಟ್ ಮೇಳ ಹಮ್ಮಿಕೊಳ್ಳಲಾಯಿತು.
ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಧರಿಸದವರನ್ನು ಮನವರಿಕೆ ಮಾಡಿ ಸ್ಥಳದಲ್ಲಿಯೇ ಕಡಿಮೆ ಬೆಲೆಯ ಹೆಲ್ಮೆಟ್ ಕೊಡಿಸಲಾಯಿತು. ಹಿರಿಯ ಮೋಟರು ವಾಹನ ನಿರೀಕ್ಷಕ ಚರಣ್ ಕೆ., ಬೆಳ್ತಂಗಡಿ ಸಂಚಾರಿ ಪೊಲೀಸ್ ಉಪ ನಿರೀಕ್ಷಕ ಅರ್ಜುನ್ ಮತ್ತು ಸಿಬ್ಬಂದಿ ವರ್ಗದವರು, ಎಲ್ಮೆಟ್ ವ್ಯಾಪಾರಸ್ಥರು ಉಪಸ್ಥಿತರಿದ್ದರು.