ಮುಂಡಾಜೆಯಲ್ಲಿ ಬಸ್ ಅಪಘಾತ – ಉಜಿರೆಯಲ್ಲಿ ಎ.ಬಿ.ವಿ.ಪಿ ಪ್ರತಿಭಟನೆ – ಡಿಪೋ ವ್ಯವಸ್ಥಾಪಕರು ಸ್ಥಳಕ್ಕೆ ಬರುವಂತೆ ಆಗ್ರಹ

0

ಉಜಿರೆ: ಮುಂಡಾಜೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜ. 28 ರಂದು ಸಂಜೆ ನಡೆದ ಅಪಘಾತದಲ್ಲಿ ಹಲವು ವಿದ್ಯಾರ್ಥಿಗಳಿಗೆ ಗಾಯವಾಗಿದ್ದು, ಕೇಳಲು ಹೋದ ವಿದ್ಯಾರ್ಥಿಗಳಿಗೆ ಉಡಾಫೆಯ ಉತ್ತರ ನೀಡುತ್ತಿರುವ ಸಾರಿಗೆ ಇಲಾಖೆಯ ವಿರುದ್ಧ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್, ಬೆಳ್ತಂಗಡಿ ತಾಲೂಕು ವತಿಯಿಂದ ಜ. 29 ರಂದು ಉಜಿರೆ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡಿದ ಘಟನೆ ನೆಡಯಿತು.

ಧರ್ಮಸ್ಥಳದಿಂದ ಕಡಿರುದ್ಯಾವರ ಗ್ರಾಮದ ಆಲಂದಡ್ಕ ಸಾಗುವ ಸಾರಿಗೆ ಬಸ್‌ವೊಂದು ಮುಂಡಾಜೆ ಸಮೀಪದ ಸೋಮಂತಡ್ಕ ಪಕ್ಕದ ಚರಂಡಿಗೆ ಸರಿದ ಘಟನೆಯೊಂದು ನಡೆದಿತ್ತು. ಸರಿ ಸುಮಾರು 4.30 ಕ್ಕೆ ಈ ಅಪಘಾತ ನಡೆದಿದ್ದು, ಬಸ್‌ನಲ್ಲಿ ವಿದ್ಯಾರ್ಥಿಗಳೇ ಇದ್ದಿದ್ದು, ಬಹುತೇಕ ಮಂದಿಗೆ ಗಾಯವಾಗಿತ್ತು.

ಸಾರಿಗೆ ಬಸ್‌ನ ಸ್ಟೇರಿಂಗ್‌ ಕಟ್‌ ಆಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿತ್ತು. ಬಸ್‌ನ ಸ್ಟೇರಿಂಗ್‌ ಕಟ್‌ ಆಗಿ ಅದರ ಕಂಡೀಷನ್‌ ಸರಿ ಇಲ್ಲದ ಕಾರಣ ವಿದ್ಯಾರ್ಥಿಗಳು ಮಾತ್ರವಲ್ಲದೇ ಜನರಿಗೆ ಹಾನಿಯುಂಟಾಗುವ ಘಟನೆ ನಡೆದಿದೆ. ಈ ವಿಚಾರದ ವಿರುದ್ಧ ಈಗಾಗಲೇ ವಿದ್ಯಾರ್ಥಿ ಪರಿಷತ್‌ ಅನೇಕ ವರ್ಷಗಳಿಂದ ಬಸ್‌ನ ಸಮಸ್ಯೆ ಸರಿ ಮಾಡಬೇಕು ಜೊತೆಗೆ ಬಸ್‌ನ ಸಂಖ್ಯೆಯನ್ನು ಹೆಚ್ಚು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟವನ್ನು ಮಾಡುತ್ತಾ ಬಂದಿದೆ.

ಆದರೆ ಇಂತಹ ಹೋರಾಟಕ್ಕೆ ಸರಕಾರ ಯಾವುದೇ ರೀತಿಯ ಬೆಲೆಯನ್ನು ಕೊಡದ ನಿಟ್ಟಿನಲ್ಲಿ ಉಜಿರೆ ಸರ್ಕಲ್‌ನಲ್ಲಿ ವಿದ್ಯಾರ್ಥಿ ಪರಿಷತ್‌ ಹೋರಾಟಕ್ಕೆ ಮುಂದಾಗಿದೆ. ಹಾಗಾಗಿ ಹೋರಾಟ ಸ್ಥಳಕ್ಕೆ ಡಿಪೋ ಮ್ಯಾನೇಜರ್‌ ಬರಬೇಕು ಮತ್ತು ಜನರ ಸಮಸ್ಯೆಯನ್ನು ಆಲಿಸಬೇಕು. 10-15 ವರ್ಷಗಳ ಹಿಂದಿನ ಬಸ್ ಗಳನ್ನು ಓಡಿಸುವಂತಹ ಕೆಲಸಗಳು ಮಂಗಳೂರು – ಧರ್ಮಸ್ಥಳದ ಡಿಪ್ಪೋಗಳಲ್ಲಿ ಆಗುತ್ತಿದೆ. ಹಾಗಾಗಿ ಇಂತಹ ಅನಾಹುತಗಳು ಪದೇ ಪದೇ ನಡೆಯುತ್ತಿದೆ. ಬಸ್ ನ ಸಂಖ್ಯೆಗಳನ್ನು ಹೆಚ್ಚು ಮಾಡಬೇಕು. ಸೋಮಂತಡ್ಕದಲ್ಲಿ ನಡೆದ ಅನಾಹುತದಲ್ಲಿ ಕೂಡ ಓವ‌ರ್ ಲೋಡ್ ಆಗಿತ್ತು. ಸುರಕ್ಷತಾ ಕ್ರಮಗಳನ್ನು ಕೆ.ಎಸ್.ಆ‌ರ್.ಟಿ.ಸಿ ತೆಗೆದುಕೊಳ್ಳಬೇಕು. ಒಳ್ಳೆಯ ರೀತಿಯ ವ್ಯವಸ್ಥೆಯುತವಾದಂತಹ ಬಸ್ ಗಳನ್ನು ಹಾಕಬೇಕು ಎನ್ನುವುದು ನಮ್ಮ ಬೇಡಿಕೆ ಎಂದು ಜಿಲ್ಲಾ ಸಂಚಾಲಕರಾದ ಸುವಿತ್‌ ಶೆಟ್ಟಿ ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ವಿಭಾಗ ಸಂಘಟನೆಯ ಕಾರ್ಯದರ್ಶಿ ಚಂದ್ರಶೇಖರ್‌, ಜಿಲ್ಲಾ ಸಂಚಾಲಕ ಸುವಿತ್‌ ಶೆಟ್ಟಿ, ತಾಲೂಕು ಸಂಚಾಲಕ ಪ್ರಾರ್ಥನ್‌ ಗೌಡ ಅವರು ಭಾಗವಹಿಸಿದ್ದು, ಸರಕಾರದ ಅವ್ಯವಸ್ಥೆಯ ವಿರುದ್ಧ ಧ್ವನಿಗೂಡಿಸಿದ್ದಾರೆ.

ಪೋಲಿಸ್ ಇಲಾಖೆ ಅಧಿಕಾರಿಗಳು ವಿಧ್ಯಾರ್ಥಿಗಳಿಗೆ ರಸ್ತೆ ತಡೆಯದಂತೆ ಮನವಿ ಮಾಡಿದರು. ಧರ್ಮಸ್ಥಳ ಡಿಪೋ ವ್ಯವಸ್ಥಾಪಕರು ರಜೆಯಲ್ಲಿ ಇದ್ದ ಕಾರಣ ಸ್ಥಳಕ್ಕೆ ಸಹ ವ್ಯವಸ್ಥಾಪಕರು ಆಗಮಿಸಿದರು.
ಪ್ರತಿಭಟನೆ ಬಂದೋಬಸ್ಥಿನಲ್ಲಿ ತೊಡಗಿದ್ದ ಬೆಳ್ತಂಗಡಿ ಸಂಚಾರಿ ಠಾಣೆಯ ಮಹಿಳಾ ಸಿಬ್ಬಂದಿಯ ಕಾಲಿನ ಮೇಲೆ ವಾಹನ ಚಲಾಯಿಸಿದ ಘಟನೆಯು ನಡೆಯಿತು ತಕ್ಷಣ ಅದೇ ವಾಹನದಲ್ಲಿ ಇವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಬೆಳ್ತಂಗಡಿ ನಿರೀಕ್ಷಕರು ಸುಬ್ಬಪೂರ್ ಮಟ್, ಟ್ರಾಫಿಕ್ ಠಾಣಾಧಿಕಾರಿ ಅರ್ಜುನ್, ಬೆಳ್ತಂಗಡಿ ಪೋಲೀಸ್ ಉಪ (ಕಾ. ಸೂ) ನಿರೀಕ್ಷಕರು ಮುರಳೀಧರ್, ಧರ್ಮಸ್ಥಳ ಠಾಣಾಧಿಕಾ ಸಮರ್ಥ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here