ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ – 12 ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಜಯಭೇರಿ

0

ಬೆಳ್ತಂಗಡಿ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಜ. 27 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ 12 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಾದ ಸಾಮಾನ್ಯ ಕ್ಷೇತ್ರದ ಪಿ. ಕುಶಾಲಪ್ಪ ಗೌಡ, ವಿಠಲ ಬಂಡಾರಿ, ಶ್ರೀನಾಥ ಬಿ., ಪದ್ಮನಾಭ ಕೆ., ಉದಯ ಎ., ಮಹಾಬಲ ಶೆಟ್ಟಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸುನಿಲ್, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ರವಿಚಂದ್ರ ಪಿ., ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ಪ್ರೇಮಾವತಿ, ಅಶ್ವಿನಿ, ಪ. ಪಂಗಡ ಕ್ಷೇತ್ರದಿಂದ ವಿಶ್ವನಾಥ, ಪ. ಜಾತಿ ಕ್ಷೇತ್ರದಿಂದ ಮುತ್ತಪ್ಪ ಜಯ ಗಳಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೆಲ್ಲರೂ ಸೋಲನ್ನು ಕಂಡಿದ್ದಾರೆ.

ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಎನ್.ಜೆ. ಗೋಪಾಲ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ನ್ಯಾಯಾಲಯದ ಆದೇಶದ ಬಳಿಕ ಘೋಷಣೆ: ಸಹಕಾರಿ ಸಂಘದ 2 ಮಹಾಸಭೆಗೆ ಗೈರು ಹಾಜರಾದ ಸಂಘದ ಸದಸ್ಯರಿಗೆ ಸಹಕಾರಿ ಸಂಘದ ನಿಯಮದಂತೆ ಸಂಘದ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಇಲ್ಲ. ಈ ಹಿನ್ನಲೆಯಲ್ಲಿ ಮತದಾನದ ಅವಕಾಶ ಕಳೆದುಕೊಂಡ ಸಂಘದ ಸದಸ್ಯರು ಬೆಂಗಳೂರು ಉಚ್ಚನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್ವಿಟಿಷನ್‌ನಂತ ನ್ಯಾಯಲಯ ಎಲ್ಲ ಸದಸ್ಯರಿಗೂ ಮತದಾನಕ್ಕೆ ಅನುಮತಿ ನೀಡಿ, ಮುಂದಿನ ಆದೇಶವನ್ನು ಕಾಯ್ದಿರಿಸಿದೆ.

ನ್ಯಾಯಾಯಲದ ಆದೇಶದಂತೆ ಮತದಾನಕ್ಕೆ ಅನುಮತಿ ಪಡೆದಿರುವ ಸದಸ್ಯರು ಮತ ಚಲಾಯಿಸಿದ್ದು, ಆ ಮತಗಳನ್ನು ಪ್ರತ್ಯೇಕವಾಗಿ ನಿರ್ವಹಿಸಿ, ಅಭ್ಯರ್ಥಿ, ಏಜಂಟರ ಸಮ್ಮುಖದಲ್ಲಿ ಎಣಿಕೆಯನ್ನು ಮಾಡಲಾಗಿದೆ. ಎಲ್ಲಾ ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಉಚ್ಚ ನ್ಯಾಯಾಲಯದ ಆದೇಶ ಬಂದ ನಂತರ ಚುನಾವಣಾಧಿಕಾರಿಗಳು ಘೋಷಣೆ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here