ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರೀ ಧ. ಮಂ. ಅನುದಾನಿತ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿರುವ ಪದ್ಮರಾಜ್ ಎನ್. ಜೈನ್ ಆಗಮಿಸಿ ಧ್ವಜಾರೋಹಣವನ್ನು ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದಲ್ಲಿ ಇವರು ಮಾತನಾಡುತ್ತಾ ರಾಷ್ಟ್ರೀಯ ಹಬ್ಬಗಳನ್ನು ಅತ್ಯಂತ ಸಂಭ್ರಮದಿಂದ ನಾವು ಆಚರಿಸಬೇಕು. ಭಾರತದ ಇತಿಹಾಸ, ಭಾರತದ ಪರಂಪರೆ, ಸ್ವರಾಜ್ಯದ ಮಹತ್ವ, ಒಗ್ಗಟ್ಟಿನ ಬಲ, ವಿದ್ಯಾರ್ಥಿಗಳ ಕರ್ತವ್ಯ ಹಾಗೂ ತನ್ನ ಗುಣದಲ್ಲಿ ಮಾಡಬೇಕಾದ ಉತ್ತಮ ಮಾರ್ಪಾಡುಗಳನ್ನು, ಸಂವಿಧಾನದ ರಚನೆ ಹಾಗೂ ಮಹತ್ವ ಜೊತೆಗೆ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾದ ಉತ್ತಮ ಹವ್ಯಾಸ ಇತ್ಯಾದಿಗಳನ್ನು ಹಲವು ಉದಾಹರಣೆ ಹಾಗೂ ಕಥೆಗಳ ಮೂಲಕ ವಿದ್ಯಾರ್ಥಿಗಳ ಮನ ಮುಟ್ಟುವಂತೆ ವಿವರಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ. ವಿ. ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಬಳಿಕ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಬಿಂಬಿಸುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ತದನಂತರ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು. ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಹಾಗೂ ವಿದ್ಯಾರ್ಥಿಗಳ ಭಾಗವಹಿಸುವಿಕೆ ಇಂದ ಕಾರ್ಯಕ್ರಮ ಸುಂದರವಾಗಿ ಮೂಡಿಬಂತು.
ಶಾಲಾ ವಿದ್ಯಾರ್ಥಿನಿ ಪೂರ್ವಿಭಟ್ ನಡೆಸಿಕೊಟ್ಟ ಕಾರ್ಯಕ್ರಮ ನಡೆಸಿ ಕೊಟ್ಟು, ಶ್ರೇಯಾ ಅತಿಥಿಗಳ ಪರಿಚಯ ಮಾಡಿ ಧನ್ಯಶ್ರಿ ಧನ್ಯವಾದ ಇತ್ತರು.