ಪದ್ಮುಂಜ: ಸ. ಹಿ. ಪ್ರಾ. ಶಾಲೆಯಲ್ಲಿ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಸಲಾಯಿತು. ಎಸ್. ಡಿ. ಎಂ. ಸಿ ಅಧ್ಯಕ್ಷ ಪುರುಷೋತ್ತಮ ಧ್ವಜಾರೋಹಣ ನೆರವೇರಿಸಿದರು. ವಿಧ್ಯಾರ್ಥಿ ವಿಧ್ಯಾರ್ಥಿನಿಯ ಗಣರಾಜ್ಯೋತ್ಸವ ಸಂವಿಧಾನ ಜಾರಿಗೆ ಬಂದ ಬಗ್ಗೆ ಕನ್ನಡ ಇಂಗ್ಲಿಷ್ ಹಿಂದಿ ಭಾಷೆಯಲ್ಲಿ ಬಾಷಣ ಮಾಡಿದರು.
ಎಸ್. ಡಿ. ಎಂ. ಸಿ ಸದಸ್ಯ ಕಾಸಿಂ ಪದ್ಮುಂಜ ಮಾತನಾಡಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಕೀರ್ತಿ ಮೇಡಂ ಮಾತನಾಡಿ ಗಣರಾಜ್ಯೋತ್ಸವ ಮಹತ್ವವನ್ನು ವಿವರಿಸಿದರು. ಅಧ್ಯಾಪಕಿಯವರಾದ ತೇಜ ಪ್ರಣೀತಾ, ಮೋಕ್ಷಿತ, ಕಾವ್ಯಶ್ರೀ, ಇಂದಿರಾ ಹಾಗೂ ಎಸ್. ಡಿ. ಎಂ. ಸಿ ಸದಸ್ಯರು ಉಪಸ್ಥಿತರಿದ್ದರು.
ವಿಧ್ಯಾರ್ಥಿಗಳಾದ ಚರಿಕ್ಷಾ ಸ್ವಾಗತಿಸಿದರು. ವಫಿಯ ಕಾರ್ಯಕ್ರಮ ನಿರೂಪಿಸಿದರು. ಮುಫಿದಾ ಧನ್ಯವಾದ ಸಲ್ಲಿಸಿದರು.