ಪದ್ಮುಂಜ: ನುಸುರತ್ತುಸ್ಸಿಭಿಯಾನ್ ಮದರಸದಲ್ಲಿ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಸಲಾಯಿತು. ಜಮಾತ್ ಅಧ್ಯಕ್ಷ ರಫೀಕ್ ಧ್ವಜಾರೋಹಣ ನೆರವೇರಿಸಿದರು. ಅಧ್ಯಾಪಕ ಅಬ್ದುಲ್ ರಶೀದ್ ಹಿಕಮಿ ಯವರು ಪ್ರಾರ್ಥನೆ ನಡೆಸಿದರು.
ಮಸೀದಿಯ ಮುಖ್ಯ ಗುರುಗಳಾದ ಹುಸೈನ್ ಸುಲ್ತಾನಿ ಸ ಅದಿ ಮುಖ್ಯ ಪ್ರಭಾಷಣ ನಡೆಸಿದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಕಾಸಿಂ ಪದ್ಮುಂಜ ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ವಿವರಿಸಿದರು. ಸ್ವಾಲಿಹ್ ಮತ್ತು ತಂಡ ರಾಷ್ಟ್ರ ಗೀತೆ ಹಾಡಿದರು.
ರಾಫೀಹ್ ಕನ್ನಡ ಬಾಷಣ ಮಾಡಿದರು. ರಯೀಸ್ ಸಂವಿಧಾನ ಪೀಠಿಕೆ ಹೇಳಿಕೊಟ್ಟರು. ಜಮಾಅತ್ ಕೆ. ಎಂ. ಜೆ. ಎಸ್. ವೈ. ಎಸ್. ಎಸ್. ಬಿ. ಎಸ್. ಸಂಘಟನಾ ನಾಯಕರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಸಾಹಿಲ್ ಸ್ವಾಗತಿಸಿದರು. ಅರ್ಶದ್ ಧನ್ಯವಾದ ಸಲ್ಲಿಸಿದರು.