ಉಜಿರೆ: ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಎಸ್. ಡಿ. ಎಂ. ಎಜುಕೇಶನಲ್ ಸೊಸೈಟಿ ಆಶ್ರಯದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸ್ತಬ್ಧ ಚಿತ್ರ ಸ್ಪರ್ಧೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ರತ್ನಮಾನಸ’ ಜೀವನ ಶಿಕ್ಷಣ ವಸತಿ ನಿಲಯದ ಪ್ರಸ್ತುತಿಗೆ ದ್ವಿತೀಯ ಬಹುಮಾನ ಲಭಿಸಿದೆ. ಅತಿಥಿ, ನಿವೃತ್ತ ಕರ್ನಲ್ ನಿತಿನ್ ಭಿಡೆ ಪ್ರಶಸ್ತಿ ವಿತರಿಸಿದರು. ಸ್ತಬ್ಧಚಿತ್ರವನ್ನು ಶಿಕ್ಷಕ ರವೀಶ್ ಕುಮಾರ್ ಸಂಯೋಜಿಸಿದ್ದರು.
Home ಇತ್ತೀಚಿನ ಸುದ್ದಿಗಳು ಉಜಿರೆ: ಶ್ರೀ ಧ. ಮ. ಸೆಕಂಡರಿ ಶಾಲೆ ಗಣರಾಜ್ಯೋತ್ಸವ – ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ದ್ವಿತೀಯ