ಬಂದಾರು: ಬಂದಾರು ಗ್ರಾಮ ಪೆರ್ಲ -ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಪುನರ್ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಕಾರಣಿಕರ್ತರಾದ ಸಮಸ್ತರಿಗೆ ಅಭಿನಂದನಾ ಸಭೆ ಸಿದ್ಧಿಶ್ರೀ ಕಲಾವೇದಿಕೆಯಲ್ಲಿ ಜ. 26 ರಂದು ನಡೆಯಿತು.
ಬ್ರಹ್ಮಕಲಶೋತ್ಸವ ಯಶಸ್ಸಿಗೆ ಕಾರಣಿಭೂತರಾದ ವಿವಿಧ ಸಮಿತಿಗಳಿಗೆ, ದಾನಿಗಳಿಗೆ, ಭಕ್ತವೃಂದಕ್ಕೆ ಅಭಿನಂದನೆ ಸಲ್ಲಿಸಿ ಯುವ ಉದ್ಯಮಿ ಕಿರಣ್ ಚಂದ್ರ ಡಿ. ಪುಷ್ಪಗಿರಿ ಶುಭ ನುಡಿ ಸಲ್ಲಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಗೌಡ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಕೃಷಿ ವಿಭಾಗ ಮುಖ್ಯಸ್ಥರಾದ ಬಜೆಗುತ್ತು ಬಾಲಕೃಷ್ಣ ಪೂಜಾರಿ ಅಭಿನಂದನಾ ಮಾತುಗಳನ್ನಾಡಿದರು, ಮುಖ್ಯ ಅತಿಥಿಗಳಾಗಿ ಉಜಿರೆ ಎಸ್. ಡಿ. ಎಂ ಕಾಲೇಜು ಉಪನ್ಯಾಸಕ ದಿವಾ ಕೊಕ್ಕಡ ಇವರು ಸಂದರ್ಭಯೋಚಿತವಾಗಿ ಮಾತುಗಳನ್ನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ವಿಭಾಗ ಯೋಜನಾಧಿಕಾರಿ ಸುರೇಂದ್ರ, ಅನುವಂಶೀಯ ಆಡಳಿತ ಮೊಕ್ತೇಸರ ಕುಕ್ಕಪ್ಪ ಗೌಡ, ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು, ಕಾರ್ಯದರ್ಶಿ ಉಮೇಶ್ ಗೌಡ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾಜೆ, ಕೋಶಾಧಿಕಾರಿ ಕೇಶವ ಗೌಡ ಕೊಂಗುಜೆ, ದೇವಳದ ಅರ್ಚಕ ಅನಂತರಾಮ ಶಬರಾಯ, ಭಜನಾ ಮಂಡಳಿ ಅಧ್ಯಕ್ಷ ಲಕ್ಷ್ಮಣ ಗೌಡ ಫಲಸದಕೋಡಿ, ಮಹಿಳಾ ಸಮಿತಿ ಅಧ್ಯಕ್ಷ ಶ್ವೇತಾ ಹಾರ್ತ್ಯಾರು ವೇದಿಕೆಯಲ್ಲಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸತೀಶ್ ಬಾಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು. ದೇವಳಕ್ಕೆ ವಸ್ತು ರೂಪದಲ್ಲಿ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ವಿವಿಧ ಸಮಿತಿ ಪದಾಧಿಕಾರಿಗಳು, ಭಕ್ತವೃoದವರು ಉಪಸ್ಥಿತರಿದ್ದರು.