ಕಕ್ಕಿಂಜೆ: ಬೆಂದ್ರಾಳ ವೆಂಕಟಕೃಷ್ಣ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಹಾಗೂ ಬಿರ್ಲಾ ಫರ್ಟಿಲಿಟಿ ಮತ್ತು ಐ.ವಿ. ಎಫ್ ಇದರ ಸಹಯೋಗದಲ್ಲಿ “ಉಚಿತ ಸಂತಾನೋತ್ಪತಿ ಮತ್ತು ಮಹಿಳಾ ಆರೋಗ್ಯ ತಪಾಸಣೆ ಶಿಬಿರ” ಜ. 26 ರಂದು ಶ್ರೀ ಕೃಷ್ಣ ಆಸ್ಪತ್ರೆ ಮಹಿಳೆಯರಿಗಾಗಿ ಉಚಿತ ಸಂತಾನೋತ್ಪತಿ ಮತ್ತು ಮಹಿಳಾ ಆರೋಗ್ಯ ತಪಾಸಣೆ ಶಿಬಿರವು ನಡೆಯಿತು.
ಕಾರ್ಯಕ್ರಮದಲ್ಲಿ ಬಿರ್ಲಾ ಫರ್ಟಿಲಿಟಿ ಮತ್ತು ಐ.ವಿ.ಎಫ್ ನ ಮುಖ್ಯ ಇನ್ಫರ್ಟಿಲಿಟಿ ಕನ್ಸಲ್ಟೆಂಟ್ ಡಾ.ಗೌರವ್ ಗುಜರಾತಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಮುರಳಿಕೃಷ್ಣ ಇರ್ವತ್ರಾಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಂದನಾ ಎಂ. ಇರ್ವತ್ರಾಯ, ಆಡಳಿತಾಧಿಕಾರಿ ಜ್ಯೋತಿ ವಿ. ಸ್ವರೂಪ್, ಬಿರ್ಲಾ ಫರ್ಟಿಲಿಟಿ ಮತ್ತು ಐ.ವಿ.ಎಫ್ ನ ಸೆಂಟರ್ ಮ್ಯಾನೆಜರ್ ಅಭಿಲಾಶ್, ಸಿನಿಯರ್ ಕೌನ್ಸಿಲರ್ ಪ್ರೇಕ್ಷಾ, ಮಾರ್ಕೆಟಿಂಗ್ ಹೆಡ್ ರಾಕೇಶ್ ರಾವ್, ಮಾರ್ಕೆಟಿಂಗ್ ನ ಶೈಲೇಶ್ ಕುಮಾರ್ ಮತ್ತು ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಮೊದಲಾದವರಿದ್ದರು.
ಶಿಬಿರದಲ್ಲಿ ಸಾರ್ವಜನಿಕರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.