ಮರೋಡಿ: ಶ್ರೀ ದೈವ ಕೊಡಮಣಿತ್ತಾಯ ದೈವಸ್ಥಾನ ದೇರಾಜೆಬೆಟ್ಟದಲ್ಲಿ ಜ. 26 ರಂದು ನಡೆಯಲಿರುವ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಬೆಳಗ್ಗೆ 9 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಮುಹೂರ್ತ ಕಂಬ ಏರಿಸುವ ಕಾರ್ಯಕ್ರಮವೂ ನೆರವೇರಿತು.
ಶ್ರೀ ಕೊಡಮಣಿತ್ತಾಯ ದೈವದ ದರ್ಶನ ಪಾತ್ರಿ ಪ್ರಸಾದ್ ಮುಹೂರ್ತ ಕಂಬ ನೆರವೇರಿಸಿದರು.
ಕ್ಷೇತ್ರದ ಆಡಳಿತ ಮುಖ್ಯಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸಂಜೆ 5 ಗಂಟೆಗೆ ಶ್ರೀ ದೈವ ಹಾಗೂ ಶ್ರೀ ಕೊಡಮಣಿತ್ತಾಯ ದೈವದ ಭಂಡಾರವೂ ಉಚ್ಚೂರು ಹಾಗು ಪಾಂಡಿಬೆಟ್ಟು ಗುತ್ತುವಿನಿಂದ ಕ್ಷೇತ್ರಕ್ಕೆ ಆಗಮಿಸಿ, ರಾತ್ರಿ 7 ಗಂಟೆಯಿಂದ ಶ್ರೀ ದೈವದ ನೇಮೋತ್ಸವ. ಹಾಗು ರಾತ್ರಿ 9 ಗಂಟೆಯಿಂದ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ವಿಜೃಂಭಣೆಯಿಂದ ನಡೆಯಲಿದೆ.