ಜೆ. ಸಿ. ಐ ಬೆಳ್ತಂಗಡಿ ಮಂಜುಶ್ರೀ – ಯುವ ದಿನಾಚರಣೆ ಪ್ರಯುಕ್ತ ತರಬೇತಿ

0

ಬೆಳ್ತಂಗಡಿ: ಜ. 24 ರಂದು ಜೆ. ಸಿ. ಐ ಮಂಜುಶ್ರೀ ಈ ವರ್ಷದ ಮೊದಲ ಕಾರ್ಯಕ್ರಮವಾದ ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ತರಬೇತಿ ಕಾರ್ಯಕ್ರಮವನ್ನು ಲಾಯಿಲ ವಿಘ್ನೇಶ್ವರ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಘಟಕದ ಪೂರ್ವ ಅಧ್ಯಕ್ಷರು, ರಮ್ಯ 1 ಗ್ರಾಂ. ಗೋಲ್ಡ್ ಉಜಿರೆಯ ಇದರ ಮಾಲಕರಾದ ಜೆ.ಸಿ ಪ್ರಸಾದ್ ಬಿ. ಎಸ್. ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭಹಾರೈಸಿದರು

ತರಬೇತುದಾರರಾಗಿ ಜೆ.ಸಿ.ಐ ವಲಯ 15ರ ಪೂರ್ವ ವಲಯ ಉಪಾಧ್ಯಕ್ಷರು, ವಲಯ ತರಬೇತುದಾರರಾದ ಜೆ. ಸಿ. ಶಂಕರ್ ರಾವ್ ಸುಸ್ಥಿರ ಭವಿಷ್ಯಕ್ಕಾಗಿ ಯುವ ಜನತೆ ಎನ್ನುವ ವಿಷಯದ ಬಗ್ಗೆ ತರಬೇತಿಯನ್ನು ನೀಡಿದರು.

ತರಬೇತಿ ಕಾರ್ಯಕ್ರಮದಲ್ಲಿ ಶ್ರೀ ಬಲಮುರಿ ಭಜನಾ ಮಂಡಳಿ ಲಾಯಿಲ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಲಾಯಿಲ, ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ ಇದರ ಸದಸ್ಯರು ಹಾಗೂ ಬಜಕರು, ಜೆ.ಸಿ.ಐ ಬೆಳ್ತಂಗಡಿಯ ಸದಸ್ಯರು ಜೂನಿಯರ್ ಜೆ. ಸಿ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ. ಸಿ. ಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷೆ ಜೆ. ಸಿ. ಆಶಾಲತಾ ಪ್ರಶಾಂತ್ ವಹಿಸಿ ಸರ್ವರಿಗೂ ಸ್ವಾಗತ ಕೋರಿದರು,

ಜೆ. ಸಿ. ವಾಣಿಯನ್ನು ಜೂನಿಯರ್ ಜೆ. ಸಿ. ಸದಸ್ಯರಾದ ಜೆ. ಸಿ. ತ್ರಿಷಾ ಉದ್ಘೋಷಿಸಿ, ತರಬೇತುದಾರರ ಪರಿಚಯಯನ್ನು ಜೂನಿಯರ್ ಜೆ. ಸಿ ಸದಸ್ಯರಾದ ಜೆ. ಜೆ. ಸಿ ನೇವಿಲ್ ನವೀನ್ ಮೋರಸ್ ತಿಳಿಸಿದರು. ಸೇರಿರುವ ಸರ್ವರಿಗೂ ಧನ್ಯವಾದವನ್ನು ಘಟಕದ ಕಾರ್ಯದರ್ಶಿ ಜೆ. ಸಿ. ಶೈಲೇಶ್ ಸಲ್ಲಿಸಿದರು.

LEAVE A REPLY

Please enter your comment!
Please enter your name here