ಬೆಳ್ತಂಗಡಿ: ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘದ ಕಚೇರಿ ಜ. 23 ರಂದು ತಾಲೂಕು ಪಂಚಾಯತ್ ಹತ್ತಿರ ಇರುವ ಧರ್ಮಶ್ರೀ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ಈ ಸಂಸ್ಥೆಯು ವಿಕಲಚೇತನರೇ, ವಿಕಲಚೇತನರಿಂದ, ವಿಕಲಚೇತನರಿಗೋಸ್ಕರ ನಡೆಸಲ್ಪಡುವ ಸಂಸ್ಥೆಯಾಗಿದ್ದು, ಸಾಮಾನ್ಯ ಜನರಿಗೂ ಕೂಡ ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನು ಪಡೆಯುವ ಅವಕಾಶ ಕಲ್ಪಿಸಿದ್ದು, ಸೌಭಾಗ್ಯದ ಬೆಳಕು ಎಲ್ಲರ ಮನೆಯಲ್ಲಿ ನಂದಾ ದೀಪವಾಗಿ ಬೆಳಗುವಂತೆ ಮಾಡುವ ಆಶಯವನ್ನು ಹೊಂದಿದೆ.
ಸಂಸ್ಥೆಯಲ್ಲಿ ವಿಕಲಚೇತನರಿಗೆ ಹಾಗೂ ಜನಸಾಮಾನ್ಯರಿಗೆ ವಿವಿಧ ರೀತಿಯ ಸಾಲ ಸೌಲಭ್ಯಗಳಾದ ವೈಯುಕ್ತಿಕ/ಜಾಮೀನು ಸಾಲ, ಆಧಾರ ಪತ್ರಗಳ ಮೇಲೆ ಸಾಲ, ಸ್ಥಿರಾಸ್ತಿ ಆಧಾರಿತ ಸಾಲ, ಸಂಬಳ ಆಧಾರಿತ ಸಾಲ, ಗೃಹ ನಿರ್ಮಾಣ ಅಥವಾ ಖರೀದಿ ಸಾಲ, ಗೃಹ ವಿಸ್ತರಣಾ ಸಾಲ, ಶೈಕ್ಷಣಿಕ ಸಾಲ, ವಾಹನ/ಯಂತ್ರೋಪಕರಣ ಸಾಲ, ಚಿನ್ನಾಭರಣ ಸಾಲ, ಠೇವಣಾತಿಗಳ ಆಧಾರ ಸಾಲ, ಗೃಹಕೃತ್ಯದ ಅಗತ್ಯಗಳಿಗಾಗಿ ಸಾಲ, ನಿವೇಶನ ಖರೀದಿ ಸಾಲ, ಹೈನುಗಾರಿಕೆ ಮತ್ತು ವ್ಯಾಪಾರ ಉದ್ಯೋಗಳಿಗೆ ಸಾಲ ಸೌಲಭ್ಯ ದೊರಕಲಿದ್ದು ಠೇವಣಿ ಸೌಲಭ್ಯಗಳಾದ ಭದ್ರತಾ ಠೇವಣಿ, ಆರ್.ಡಿ ಖಾತೆ, ಉಳಿತಾಯ ಖಾತೆ ಹಾಗೂ ಪಿಗ್ಮಿ ಖಾತೆಯ ಸೌಲಭ್ಯಗಳು ದೊರಕಲಿದೆ ಎಂದು ಸಂಘದ ಅಧ್ಯಕ್ಷ ಬಾಲಚಂದ್ರ ಹೆಚ್. ತಿಳಿಸಿದ್ದಾರೆ.
ಸೇವಾಭಾರತಿ ಕನ್ಯಾಡಿ ಸಂಸ್ಥಾಪಕ ವಿನಾಯಕ ರಾವ್, ಅಪರ ಸರ್ಕಾರಿ ವಕೀಲ ಬೆಳ್ತಂಗಡಿ ನ್ಯಾಯಾಲಯ ಮನೋಹರ್, ಕಚೇರಿ ಮೇಲ್ವಿಚಾರಕಿ ಸಂಧ್ಯಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.