ಧರ್ಮಸ್ಥಳ: ಗ್ರಾಮದ ಕನ್ಯಾಡಿ ಕುರ್ಮಾಣಿ ವಿಠಲ ಗೌಡರ ಪತ್ನಿ ಶಶಿಕಲಾ(51) ಜ. 24 ರಂದು ರಬ್ಬರ್ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಮೃತರು ಪುತ್ರ ರಂಜಿತ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.