ಬೆಳ್ತಂಗಡಿ: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂದಿನ 3 ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಎ. ಜಯರಾಮ್ ಶೆಟ್ಟಿ, ಸದಸ್ಯರಾಗಿ ನಿತೀಶ್ ಎಚ್., ರಾಕೇಶ್ ಕುಮಾರ್ ಪಿ. ಎನ್., ಅಶೋಕ್ ಪಾಣೂರು, ಸತೀಶ್ ಹೆಗ್ಡೆ, ಜಯಂತಿ ದೇವಾಡಿಗ, ನಂದಿತಾ, ಸೇಸ ಎಂ., ಪ್ರಧಾನ ಅರ್ಚಕರಾಗಿ ಟಿ. ವಿ. ವಿಷ್ಣುಮೂರ್ತಿ ಭಟ್ ನೇಮಕವಾಗಿದ್ದಾರೆ.
ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ದೇವಸ್ಥಾನದ ಆಡಳಿತ ಅಧಿಕಾರಿ, ವೇಣೂರು ಕಂದಾಯ ನಿರೀಕ್ಷಕ ಕುಮಾರಸ್ವಾಮಿ ನಡೆಸಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.