ಬಳಂಜ: ದ. ಕ. ಜಿ. ಪಂ. ಕಿ. ಪ್ರಾ. ಶಾಲೆ ಅಟ್ಲಾಜೆ ಬೆಳ್ತಂಗಡಿ ತಾಲೂಕು ದ. ಕ ಜಿಲ್ಲೆ ಡೈಸ್ ಕೋಡ್ 29240200601 ಹಾಗೂ ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ಇವರ ಜಂಟಿ ಸಹಭಾಗಿತ್ವದೊಂದಿಗೆ 76ನೇ ಸರ್ವೋದಯ ಫ್ರೆಂಡ್ಸ್ ಗಣರಾಜ್ಯೋತ್ಸವ ಹಾಗೂ ವಾರ್ಷಿಕ ಕ್ರೀಡಾಕೂಟ ಜ. 26 ರಂದು ಪೂರ್ವಾಹ್ನ 8. 30 ರಿಂದ ಸ. ಕಿ. ಪ್ರಾ ಶಾಲೆಯಲ್ಲಿ ನಡೆಯಲಿದೆ.
ಆಟೋಟ ಸ್ಪರ್ಧೆಗಳು ಪುರುಷರಿಗೆ: ವಾಲಿಬಾಲ್, ಹಗ್ಗಜಗ್ಗಾಟ, ಗುಂಡೆಸೆತ, ಸ್ಟೋ ಬೈಕ್, ರಿಲೇ, ಗುಡ್ಡಗಾಡು ಓಟ, ಲಕ್ಕಿಗೆಮ್, ಗೋಣಿ ಚೀಲ ಓಟ, ಮತ್ತು ಫನ್ನಿಗೇಮ್, ಮಹಿಳೆಯರಿಗೆ: ತ್ರೋಬಾಲ್, ಹಗ್ಗಜಗ್ಗಾಟ, ಗುಂಡೆಸೆತ, ಸ್ಟೋ ಬೈಕ್, ಸಂಗೀತ ಕುರ್ಚಿ, ಲಕ್ಕಿಗೆಮ್, ಮತ್ತು ಫನ್ನಿಗೇಮ್, ಮಕ್ಕಳಿಗೆ: ಲಕ್ಕಿಗಮ್, ಗೋಣಿ ಚೀಲ ಓಟ, ಕಪ್ಪೆಜಿಗಿತ ಮತ್ತು ಫನ್ನಿಗೇಮ್ ಈ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.