ಧರ್ಮಸ್ಥಳ: ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ತೆರಳುವ ವೇಳೆ ಖಾಸಗಿ ಬಸ್ ಕೇರಳದ ಮಾಯಾ ಸಮೀಪದ ಕಣ್ಣೂರುನಲ್ಲಿ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಧರ್ಮಸ್ಥಳ ನಿವಾಸಿಗಳು ಗಾಯಗೊಂಡ ಘಟನೆ ಜ. 15 ರಂದು ಬೆಳಗಿನ ಜಾವ 2. 20ಕ್ಕೆ ನಡೆದಿದೆ.
ಧರ್ಮಸ್ಥಳದಿಂದ 22 ಜನರು ಖಾಸಗಿ ಬಸ್ಸಿನಲ್ಲಿ ಶಬರಿಮಲೆಗೆ ಭೇಟಿ ನೀಡುವ ಸಂಧರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕೆಟ್ಟು ಹೋಗಿ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಬಸ್ ಮುಂಭಾಗ ಸಂಪೂರ್ಣ ಹಾನಿಯಾಗಿದ್ದು ಬಸ್ಸಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಧರ್ಮಸ್ಥಳದ ರಕ್ಷಿತ್ ಹಾಗೂ ಗಣೇಶ್ ಕಾಲಿಗೆ ಗಂಭೀರ ಗಾಯವಾಗಿದೆ. ಅವರು ಮಂಗಳೂರಿನ ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.