

ಉಜಿರೆ: ಕರ್ನಾಟಕ ರಾಜ್ಯ ಸರಕಾರ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಗಳ ವಿಶ್ವ ವಿದ್ಯಾನಿಲಯ ಮೈಸೂರು ನಡೆಸುವ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಬೆಳಾಲಿನ ‘ಈಶ ಕಲಾ ಪ್ರತಿಷ್ಟಾನ’ದ ವಿದ್ಯಾರ್ಥಿನಿ ಶ್ರೀಪ್ರಜ್ಞಾ ಕೆದಿಲಾಯ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಶಾಸ್ತ್ರ ವಿಭಾಗದಲ್ಲಿ 150 ಅಂಕಕ್ಕೆ 147 ಅಂಕ ಪಡೆದು ಮೆಚ್ಚುಗೆ ಗಳಿಸಿದ್ದಾರೆ. ಇವರು ಕವಿತಾ ಉಮೇಶ್ ರವರ ಶಿಷ್ಯೆಯಾಗಿದ್ದಾರೆ. ಸಂಸ್ಥೆಯಿಂದ ಜೂನಿಯರ್ ಪರೀಕ್ಷೆ ಕಟ್ಟಿದ ಉಳಿದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.