

ಧರ್ಮಸ್ಥಳ: ಸ್ಪೆಕ್ಟ್ರಮ್ ತಂಡದ ನೇತೃತ್ವದಲ್ಲಿ ದ. ಕ. ಜಿಲ್ಲೆ ಹಾಗೂ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ನ ಸಹಯೋಗದಲ್ಲಿ ಜ. 18 -19 ರಂದು ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ ಆಯೋಜನೆ ಮಾಡಲಾಗಿದೆ.
ಶ್ರೀ ಧ. ಮಂ. ಹೈಸ್ಕೂಲ್ ನ ಮೈದಾನದಲ್ಲಿ ನಡೆಯುವ ಟೂರ್ನಿಯಲ್ಲಿ ರಾಷ್ಟ್ರದ ಅಗ್ರ ಗಣ್ಯರು ಆಹ್ವಾನಿತ ತಂಡಗಳು ಭಾಗವಹಿಸಲಿವೆ. ಕೇರಳದ ಕೇರಳ ಯುನಿವರ್ಸಿಟಿ, ಕ್ಯಾಲಿಕಟ್ ಯುನಿವರ್ಸಿಟಿ, ಎಂ. ಜಿ. ಯುನಿವರ್ಸಿಟಿ ಕೊಟ್ಟಾಯಂ, ತಮಿಳುನಾಡಿನ ಎಸ್. ಆರ್. ಎಂ. ಯುನಿವರ್ಸಿಟಿ ಚೆನ್ನೈ, ಮದ್ರಾಸ್ ಯುನಿವರ್ಸಿಟಿ ಚೆನ್ನೈ ಹಾಗೂ ಕರ್ನಾಟಕದ ಮಂಗಳೂರು ಯುನಿವರ್ಸಿಟಿ ತಂಡಗಳು ಭಾಗವಹಿಸಲಿವೆ.
2 ದಿನಗಳ ಕಾಲ ನಡೆಯುವ ವಾಲಿಬಾಲ್ ಜಿದ್ದಾಜಿದ್ದಿಯಲ್ಲಿ ಗೆಲ್ಲುವ ತಂಡಗಳಿಗೆ ಸ್ಪೆಕ್ಟ್ರಮ್ ಟ್ರೋಫಿ ಜೊತೆ ಪ್ರಥಮ ಸ್ಥಾನಕ್ಕೆ 1ಲಕ್ಷ ರೂ., ಎರಡನೇ ಸ್ಥಾನ ಪಡೆದ ತಂಡಕ್ಕೆ 75,000 ರೂ., ಮೂರನೇ ಸ್ಥಾನ ಪಡೆದ ತಂಡಕ್ಕೆ 50,000 ರೂ. ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ 25,000 ರೂ. ನಗದು ಬಹುಮಾನ ಘೋಷಿಸಲಾಗಿದೆ.