
ಕೊಕ್ಕಡ: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ನಡೆಸಿದ ರಾಜ್ಯಮಟ್ಟದ ವಿಶೇಷ ಸಂಗೀತ ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆ 2024ರ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಹೃದ್ಯ ಟಿ. ಜಿ. 93.25% ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ಹಾಗೂ ವಿದ್ವಾನ್ ಗಿರೀಶ್ ಕುಮಾರ್ ರವರ ಶಿಷ್ಯಯಾಗಿದ್ದು, ಅಕಾಡೆಮಿಯ ಕೊಕ್ಕಡ ಶಾಖೆಯ ವಿದ್ಯಾರ್ಥಿನಿ.
ಪ್ರಸ್ತುತ ಕೊಕ್ಕಡದ ಸೈಂಟ್ ಫ್ರಾನ್ಸಿಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೊಕ್ಕಡದ ಹಿರಿಯ ವೈದ್ಯ ಡಾ. ಮೋಹನ್ ದಾಸ್ ಗೌಡರ ಮೊಮ್ಮಗಳು. ಡಾ. ತಾರಾ ಗಣೇಶ್ ಮತ್ತು ಡಾ. ಗಣೇಶ್ ಪ್ರಸಾದ್ ರವರ ಪುತ್ರಿಯಾಗಿದ್ದಾರೆ.