ಬೆಳಾಲು: ಅನಂತೋಡಿ ಶ್ರೀ ಅನಂತಪದ್ಮನಾಭಾ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಜ. 14 ರಂದು ದೇವರಿಗೆ ದೀಪಾಲಂಕಾರ, ರಂಗಪೂಜೆ ಮತ್ತು ವಾರ್ಷಿಕ ಜಾತ್ರಾ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದವರಿಗೆ ಅಭಿನಂದನಾ ಕಾರ್ಯಕ್ರಮ, ಲೆಕ್ಕಪತ್ರ ಮಂಡನೆ ದೇವಸ್ಥಾನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಜಾತ್ರಾ ಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಉದಿತ್ ಕುಮಾರ್ ಜೈನ್ ವಹಿಸಿದ್ದರು. ಸುದ್ದಿ ಬಿಡುಗಡೆಯ ವರದಿಗಾರ ಜಾರಪ್ಪ ಪೂಜಾರಿ ಬೆಳಾಲು ಅಭಿನಂದನಾ ಭಾಷಣ ಗೈದರು. ಧಾರ್ಮಿಕ ಮುಖಂಡ ದಾಮೋದರ ಶರ್ಮ ಕಾರ್ಕಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ ಜಾತ್ರೆಯ ಯಶಸ್ವಿಗೆ ಗ್ರಾಮಸ್ಥರ ಸಹಕಾರದ ಕುರಿತು ಮಾತನಾಡಿದರು.
ದೇವಸ್ಥಾನ ಮೋಕ್ತೆಸರ ಜೀವಂದರ ಕುಮಾರ್ ಜೈನ್ ಬೆಳಾಲು ಗುತ್ತು, ಅಸ್ರನ್ನ ಗಿರೀಶ್ ಬಾರಿತ್ತಾಯ ಪಾರಾಳ, ವ್ಯವಸ್ಥಾನಾ ಸಮಿತಿಯ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ ಉಪ್ಪಾರು, ಶ್ರೀ ಅನಂತೇಶ್ವರ ಭಜನಾ ಮಂಡಳಿ ಅಧ್ಯಕ್ಷ ನವೀನ್ ಗೌಡ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುಣ್ಣಾಯ ಪ್ರಸ್ತಾವನೆ ಗೈದರು. ದೇವಸ್ಥಾನದ ಲೆಕ್ಕ ಪರಿಶೋಧಕ ಬೆಳಾಲು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಗೌಡ ಎಳ್ಳುಗದ್ದೆ ಜಾತ್ರಾ ಲೆಕ್ಕಪತ್ರ ಮಂಡಿಸಿದರು. ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಗೌಡ ಎಳ್ಳುಗದ್ದೆ ಸ್ವಾಗತಿಸಿದರು. ಗಿರೀಶ್ ಮಂಜೊತ್ತು ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ್ ಗೌಡ ವಂದಿಸಿದರು.
ಕಾರ್ಯಕ್ರಮದ ಮೊದಲು ರಂಗ ಪೂಜೆ, ಮಕ್ಕಳ ಭಜನಾ ತಂಡದಿಂದ ಕುಣಿತ ಭಜನೆ ನೆರವೇರಿತು. ರಂಗ ಪೂಜೆ ಹಾಗೂ ದೀಪಾಲಂಕಾರದ ಸೇವಾ ಕರ್ತರಾಗಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ ಮತ್ತು ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಸಹಕರಿಸಿದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಉಪಸಮಿತಿ ಸಂಚಾಲಕರು, ಸಹ ಸಂಚಾಲಕರು, ಬೈಲುವಾರು ಸಮಿತಿ ಸಂಚಾಲಕರು,ಭಜನಾ ಮಂಡಳಿ, ಮಹಿಳಾ ತಂಡ, ಅನಂತೋಡಿ ಫ್ರೆಂಡ್ಸ್ ಸದಸ್ಯರು ಭಕ್ತರು ಹಾಜರಿದ್ದರು.