ಕಡಿರುದ್ಯಾವರ: ಶ್ರೀ ರಾಮಾಂಜನೇಯ ಬೆಟ್ಟ ಕಾನರ್ಪ, ಮಕರ ಸಂಕ್ರಾಂತಿಯಂದು 49 ನೇ ವರ್ಷದ ಪೂಜೆಯ ಪ್ರಯುಕ್ತ ಜ. 14 ರಂದು ರಾಮಾಂಜನೇಯ ಸ್ವಾಮಿ ಗುಡಿಯಲ್ಲಿ ಬೆಳಿಗ್ಗೆ ಗಣಹೋಮ ಪೂಜೆ ನೆರವೇರಿಸಿ, ಬ್ರಾಹ್ಮರಿ ಭಜನಾ ಮಂಡಳಿ ಕಲಾಕುಂಚ ಸೋಮಂತಡ್ಕ ತಂಡದಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಎಸ್. ಡಿ. ಎಂ ಕಾಲೇಜು ಉಜಿರೆಯ ಅಸಿಸ್ಟೆಂಟ್ ಪ್ರೊ. ಅಕ್ಷತಾ ಕೆ. ಧಾರ್ಮಿಕ ಪ್ರವಚನ ನೀಡಿದರು. ಕರಾಟೆಯಲ್ಲಿ ಉತ್ತಮ ಸಾಧನೆಗೈದ ಇಬ್ಬರು ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಶ್ರೀ ರಾಮಾಂಜನೇಯ ದೇವರಿಗೆ ವೈಭವದ ಮಹಾಪೂಜೆ, ಮಂಗಳಾರತಿ ಕಾರ್ಯಕ್ರಮ ನಡೆದು ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯ ನಡೆಯಿತು.
ಊರ ಪರವೂರ ಭಕ್ತರು, ಸ್ಥಳೀಯರು, ಸ್ವಯಂ ಸೇವಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಊರ ಪರವೂರ ದಾನಿಗಳು ವಿವಿಧ ರೀತಿಯಲ್ಲಿ ವಸ್ತು ರೂಪದಲ್ಲಿ ಸೇವೆ ಸಲ್ಲಿಸಿದರು.
ಗುಡಿಯ ವ್ಯವಸ್ಥಾಪಕ ಮೊಕ್ತೇಸರರಾದ ಕಿಶೋರ್ ಕುಮಾರ್, ಕಿರಣ್ ಕುಮಾರ್ ಕುರುಡ್ಯ, ಗಣ್ಯರಾದ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವರ್ಮಾ, ಶಿಕ್ಷಕರಾದ ಗೋಪಾಲ ಕೃಷ್ಣ, ಬಾಬುಮಾಸ್ಟರ್, ಅನಂತ ಭಟ್ ಮಚ್ಚಿಮಲೆ, ಎಕ್ಸೆಲ್ ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ನಾರಾಯಣ ಗೌಡ ದೇವಸ್ಯ, ಜಯರಾಮ್ ಮಾಸ್ಟರ್ ಕಲಾಕುಂಚ, ಬಂಗಾಡಿ ಸಿ. ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲಿಯಾನ್, ಉಪಾಧ್ಯಕ್ಷ ಆನಂದ ಗೌಡ, ಕಡಿರುದ್ಯಾವರ, ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.
ಎಲ್ಲಾ ಕಾರ್ಯಕ್ರಮಗಳನ್ನು ನಾರಾಯಣ ಪೂಜಾರಿ ಕೆ. ಎಸ್. ಆರ್. ಟಿ. ಸಿ, ಸದಾಶಿವ ನಾಯ್ಕ ಪಣಿಕಲ್ ನಿರ್ವಹಿಸಿದರು. ದೇವಸ್ಥಾನದ ಶ್ರಮದಾನ ಹಾಗೂ ಇತರ ಕೆಲಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸ್ವಯಂ ಸೇವಕರನ್ನು ಗೌರವಿಸಲಾಯಿತು.