ಶಿರ್ಲಾಲು: ನಲ್ಲಾರು, ಕರಂಬಾರು ಗ್ರಾಮಗಳ ಕೂಡುವಿಕೆಯಿಂದ ನಡೆಯುವ ದೈವ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಜಾತ್ರೆಯು ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಕಾರ್ಯಕ್ರಮದ ಅಂಗವಾಗಿ ಶಿರ್ಲಾಲು ಮತ್ತು ಕರಂಬಾರು ಶಾಲಾ ಮಕ್ಕಳ ವಿವಿಧ ವಿನೋದಾವಳಿ, ದಿ. ಕೇಶವ ಸೂರ್ಲೋಡಿ ಸ್ಮರಣಾರ್ಥ ಸಂದೇಶ್ ಕುಮಾರ್ ಸಾರಥ್ಯದಲ್ಲಿ ಧ್ವನಿಶ್ರೀ ಮೆಲೋಡಿಸ್ ಮಂಗಳೂರು ಸಂಗೀತ ರಸಮಂಜರಿ, ದೇವದಾಸ್ ಕಾಪಿಕಾಡ್ ವಿರಚಿತ ಚಾಪರ್ಕ ಕಲಾವಿದರಿಂದ ಏರ್ಲಾ ಗ್ಯಾರೆಂಟಿ ಅತ್ತ್ ನಾಟಕ ಪ್ರದರ್ಶನ ಹಾಗೂ ಅರ್ಚ ಸೂರ್ಯನಾರಾಯಣ ಭಟ್, ದೇವದಾಸ್ ಕಾಪಿಕಾಡ್, ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ನಡೆಸುತ್ತಿರುವ ಸ್ವಿಟ್ಜರ್ಲೆಂಡ್ ಜುರಿಕ್ ಯುನಿವರ್ಸಿಟಿಯ ಪ್ರೊ. ಮುಕೇಶ್ ಕುಮಾರ್ ಇವರುಗಳನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಆಡಳಿತ ಮಂಡಳಿಯ ಗೌರವಾಧ್ಯಕ್ಷ ರಮಾನಂದ ಗುಡ್ಡಾಜೆ, ಅಧ್ಯಕ್ಷ ವಿಶ್ವನಾಥ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಎಮ್. ಕೆ. ಪ್ರಸಾದ್, ಜಾತ್ರಾ ಸಮಿತಿಯ ಅಧ್ಯಕ್ಷ ಪೂಜಾರಿ ಬಂತಡ್ಕ, ಕಾರ್ಯದರ್ಶಿ ಕೃಷ್ಣಪ್ಪ ಸುದಲಾಯಿ, ಪ್ರತಾಪ್ ಕಲ್ಲಾಜೆ ಹಾಗೂ ಗಣ್ಯರಾದ ಸಂಪತ್ ಬಿ. ಸುವರ್ಣ, ಸಂಜೀವ ಪೂಜಾರಿ ಕೊಡಂಗೆ, ಮನೋಹರ ಬಳೆಂಜ ಮತ್ತು ಆಡಳಿತ ಸಮಿತಿಯ ನಿರ್ದೇಶಕರು ಉಪಸ್ಥಿತರಿದ್ದರು.
ಪ್ರತಿ ವರ್ಷದಂತೆ ಈ ಭಾರಿಯೂ ಜಾತ್ರಾಮಹೋತ್ಸವದಲ್ಲಿ ಭಕ್ತರು ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಗಂಧ ಪ್ರಸಾದ ಸ್ವೀಕರಿಸಿದರು. ಬೆರ್ಮೆರೆ ಗುಂಡದ ಹೂವಿನ ಪವಾಡ: ಪ್ರತಿವರ್ಷದಂತೆ ಈ ಭಾರಿಯೂ ಗರಡಿಯನ್ನು ಹೂವಿನ ಅಲಂಕಾರದಿಂದ ಕಂಗೊಳಿಸಲಾಗಿತ್ತು. ಆದರೆ ಬೆರ್ಮೆರ್ ಗುಂಡಕ್ಕೆ ಹಾಕಿದ್ದ ಹೂವಿನ ಮಾಲೆಯು ಕುಣಿದಾಡುತ್ತಿದ್ದು, ದೈವ ನರ್ತನದ ಸಂದರ್ಭದಲ್ಲಿ ಜೋರಾಗಿ ಕುಣಿಯುತ್ತಿದ್ದು ಭಕ್ತರ ಭಕ್ತಿಯನ್ನು ಇಮ್ಮುಡಿಗೊಳಿಸಿತು.