ಪಟ್ರಮೆ: ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಜ. 14 ರಿಂದ 18 ರವರೆಗೆ ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಗಳು ನೀಲೇಶ್ವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಜ. 14 ರಂದು ತೋರಣ ಮುಹೂರ್ತ, ಊರವರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯು ನಡೆಯಿತು. ಈ ವೇಳೆ ದೇವಸ್ಥಾನದ 2025 ರ ನೂತನ ಕ್ಯಾಲೆಂಡರ್ ನ್ನು ಅನುವಂಶಿಕ ಆಡಳಿತ ಮೊಕ್ತಸರು ನಿತೇಶ್ ಬಲ್ಲಾಳ್ ಉಳಿಯಬೀಡು, ಅರ್ಚಕ ಯು. ವಿ. ಗುರುಪ್ರಸಾದ್ ನಿಡ್ವಣ್ಣಾಯ ಬಿಡುಗಡೆಗೊಳಿಸಿದರು.
ಪಟ್ರಮೆ ಗ್ರಾ. ಪಂ. ಅಧ್ಯಕ್ಷ ಮನೋಜ್, ಪವಿತ್ರಪಾಣಿ ಶ್ರೀಧರ ಶಬರಾಯ, ದೇವಪಾಲ ಅಜಿ ಉಳಿಯಬೀಡು, ಯುವರಾಜ ಜೈನ್ ಉಳಿಯಬೀಡು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ರುಕ್ಮಯ್ಯ ಗೌಡ ಪದಳ, ಕಾರ್ಯದರ್ಶಿ ಆನಂದ ಗೌಡ ಕಲ್ಕುಡಂಗೆ, ಸೇವಾ ಸಮಿತಿ ಅಧ್ಯಕ್ಷ ಹರೀಶ್ ಗೌಡ ಅಪ್ರೋಡಿ, ಕಾರ್ಯದರ್ಶಿ ಶರಶ್ಚಂದ್ರ ಹಿರ್ತಡ್ಕ ಹಾಗೂ ಜಾತ್ರೋತ್ಸವ ಸಮಿತಿ, ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸಂಜೆ ಧ್ವಜಾರೋಹಣ, ರಾತ್ರಿ ನಡೆಯಲಿರುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ನಿತೇಶ್ ಬಲ್ಲಾಳ್ ಉಳಿಯಬೀಡು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್ ಆಗಮಿಸಲಿದ್ದಾರೆ.
ಧರ್ಮಸ್ಥಳ ಕಲ್ಲೇರಿ ಶ್ರೀ ಸಿದ್ದಿವಿನಾಯಕ ಸ್ಟೋರ್ ಉದ್ಯಮಿಗಳಾದ ರತ್ನಾಕರ ಪ್ರಭು, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದರಾದ ಬಿ. ಸೀತಾರಾಮ ತೋಳ್ಳಾಡಿತ್ತಾಯ ಧರ್ಮಸ್ಥಳ, ಹಿರಿಯ ಯಕ್ಷಗಾನ ಕಲಾವಿದ ನರೇಂದ್ರ ಕುಮಾರ್ ಉಜಿರೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಪ್ರಸಿದ್ಧ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮ ಜರಗಲಿದೆ.