

ಬೆಳ್ತಂಗಡಿ: ಆಂಧ್ರಪ್ರದೇಶದ ವಿಜಯವಾಡದಲ್ಲಿ ಜರಗಿದ 68ನೇ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗಳಿಸಿದ ತಂಡದ ಸದಸ್ಯರಾದ ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತದ ಮೂಲಕ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳು ವಿಜಯವಾಡದಿಂದ ಆಗಮಿಸಿದ ಸಂದರ್ಭ ಜ.13 ರಂದು ಉಜಿರೆಯಿಂದ ವಾಹನಗಳ ಭವ್ಯ ಮೆರವಣಿಗೆ ಮೂಲಕ ಮುಂಡಾಜೆಗೆ ಕರೆತರಲಾಯಿತು.
ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿನಯಚಂದ್ರ, ಕಾರ್ಯದರ್ಶಿ ನಾರಾಯಣ ಗೌಡ, ಸಂಚಾಲಕ ನಾರಾಯಣ ಫಡಕೆ, ಮುಂಡಾಜೆ ಪಂಚಾಯಿತಿ ಅಧ್ಯಕ್ಷ ಗಣೇಶ ಬಂಗೇರ, ಉಪಾಧ್ಯಕ್ಷೆ ಸುಮಲತಾ, ಪಿ. ಡಿ. ಒ ಗಾಯತ್ರಿ, ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಗೀತಾ, ಉಪನ್ಯಾಸಕ ವೃಂದದವರು, ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಗುಣಪಾಲ ಎಂ. ಎಸ್., ಸಂದೀಪ್ ಶೆಟ್ಟಿ, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಾವಿದ ಜಯರಾಮ ಕೆ. ವಿದ್ಯಾರ್ಥಿಗಳ ಸಾಧನೆ ಕುರಿತು ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಮುಂಡಾಜೆಯ ವಿರಾಟ್ ಹಿಂದೂ ಸೇವಾ ಸಂಘ ಸಹಕರಿಸಿತು.