ಮುಗ್ರೋಡಿ ಕನ್‌ಸ್ಟ್ರಕ್ಷನ್‌ನ 10 ಲಕ್ಷ ರೂ.ಮೊತ್ತದ ಸಾಮಾಗ್ರಿ ಕಳವು

0

p>

ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದೆ. ಡಿ.ಪಿ. ಜೈನ್ ಕಂಪನಿಯಿಂದ ಬ್ಯಾಕ್ ಟು ಬ್ಯಾಕ್ ಮಾದರಿಯಲ್ಲಿ ಕಾಮಗಾರಿಯ ಟೆಂಡರ್ ಪಡೆದ ಮುಗ್ರೋಡಿ ಕನ್‌ಸ್ಟ್ರಕ್ಷನ್ ಕಾವೂರು ತಂಡ ಭರದಿಂದ ರಸ್ತೆ ಕಾಮಗಾರಿಯ ಕೆಲಸ ಮಾಡುತ್ತಿದೆ. ಹಲವೆಡೆ ಉತ್ತಮ ಅಗಲವಾದ ರಸ್ತೆ ನಿರ್ಮಾಣವಾಗಿದ್ದು ಸುಗಮ ಸಂಚಾರಕ್ಕೆ ನೆರವಾಗುತ್ತಿದೆ. ಇದರ ನಡುವೆ ಮುಗ್ರೋಡಿ ತಂಡಕ್ಕೆ ಕಳ್ಳರ ಕಾಟ ಶುರುವಾಗಿದೆ. ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆಯ ಉದ್ದಗಲಕ್ಕೂ ಅಲ್ಲಲ್ಲಿ ಹಿಟಾಟಿ, ಜೆಸಿಬಿಗಳಿಂದ ಕೆಲಸವಾಗುತ್ತಿದ್ದು ಇದೀಗ ಪ್ರತಿನಿತ್ಯ ಕಳ್ಳರ ಉಪಟಳದಿಂದಾಗಿ ಕಾಮಗಾರಿ ಪಡೆದಿರುವ ಮುಗ್ರೋಡಿ ಸಂಸ್ಥೆಯವರು ಹೈರಾಣಾಗಿದ್ದಾರೆ. ಕಳ್ಳರ ಕಾಟ ಹೆಚ್ಚಾದ್ದರಿಂದ ರಸ್ತೆಯಲ್ಲಿ ಅವರನ್ನು ಕಾಯಬೇಕು ಎಂದು ಮುಗ್ರೋಡಿ ತಂಡದವರು ಪಣ ತೊಟ್ಟರೂ ದಿನ ಬಿಟ್ಟು ದಿನ ಕದಿಯುತ್ತಿದ್ದಾರೆ. ಚಾರ್ಮಾಡಿಯ ಸುತ್ತಮುತ್ತ ಕಾಯುತ್ತಿದ್ದಾಗ ಪುಂಜಾಲಕಟ್ಟೆಯಲ್ಲಿ ಕದಿಯುತ್ತಾರೆ, ಪುಂಜಾಲಕಟ್ಟೆಯಲ್ಲಿ ಕಾಯಲು ನಿಂತರೆ ಚಾರ್ಮಾಡಿ ಉಜಿರೆ ಸುತ್ತಮುತ್ತ ಕದಿಯುತ್ತಾರೆ.

ಹಿಟಾಟಿಯ 17ಕ್ಕೂ ಹೆಚ್ಚು ಬ್ಯಾಟರಿ ಕಳ್ಳತನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿಗೆಂದು ನಿಲ್ಲಿಸಿರುವ ಹಿಟಾಚಿಯ ಬ್ಯಾಟರಿಗಳನ್ನು ಕಳ್ಳರು ಕದಿಯುತ್ತಿದ್ದಾರೆ. ಅದರಲ್ಲೂ ಈವರೆಗೆ 17ಕ್ಕೂ ಹೆಚ್ಚು ಬ್ಯಾಟರಿಗಳನ್ನು ಕದ್ದಿದ್ದು ಇದರ ಅಂದಾಜು ಮೊತ್ತ 3.5 ರಿಂದ 4 ಲಕ್ಷದಷ್ಟಾಗುತ್ತದೆ. ಮಾರ್ಗದ ಬದಿಯಲ್ಲಿ ನಿಲ್ಲಿಸಿರುವ ಹಿಟಾಚಿ, ಜೆಸಿಬಿ, ಟಿಪ್ಪರ್ ಮುಂತಾದ ವಾಹನಗಳಿಂದ ಕಳ್ಳರು ಡೀಸೆಲ್ ಕಳ್ಳತನ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅಂದಾಜು 700 ಲೀಟರ್‌ಗೂ ಹೆಚ್ಚು ಕಳ್ಳತನ ಮಾಡಿದ್ದಾರೆ. ಅಲ್ಲದೆ ಜನವರಿ 7ರಂದು ಜನರೇಟರ್‌ನ ಟರ್ಮಿನಲ್ ಕಳವುಗೈದಿದ್ದಾರೆ. ಚರಂಡಿ ಕಾಮಗಾರಿಗೆಂದು ತಂದಿರಿಸಿದ್ದ ತಲಾ ಒಂದು ಸೀಟ್‌ಗೆ 2500ಕ್ಕೂ ಹೆಚ್ಚು ರೇಟ್ ಇರುವ ೧೫೦ಕ್ಕೂ ಹೆಚ್ಚು ಸೆಂಟ್ರಿಂಗ್ ಸೀಟ್‌ಗಳನ್ನು ಕದ್ದಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಮೂಲಕ ಒಂದು ಕಡೆ ಕಳ್ಳರ ಕಾಟವಾದರೆ ಮತ್ತೊಂದೆಡೆ ಕಾಮಗಾರಿಯ ವೇಗ ಕುಂಠಿತವಾಗುತ್ತಿದೆ.

ಬೋರ್ಡ್ ಹಾಕಿದ ಮರು ದಿವಸ ಇರವುದಿಲ್ಲ-ಅದೂ ಕಳ್ಳರ ಪಾಲು: ರಸ್ತೆಯ ಅಲ್ಲಲ್ಲಿ ಬೋರ್ಡ್ ಅಳವಡಿಕೆ ಮಾಡಲಾಗುತ್ತಿದೆ. ಆದರೆ ಎಡಕ್ಕೆ ಚಲಿಸಿ, ಬಲಕ್ಕೆ ಚಲಿಸಿ ಅಂತೆಲ್ಲ ಹಾಕುವ ಬೋರ್ಡ್ ಹಾಕಿದ ಮರು ದಿವಸ ಬೆಳಗಾಗುವಾಗ ಇರುವುದಿಲ್ಲ. ಇದೆಲ್ಲವನ್ನು ಕದಿಯುವ ಕಳ್ಳರು ಯಾರು ಇನ್ನೂ ಪತ್ತೆ ಹಚ್ಚಲಾಗಿಲ್ಲ.

ಪುಂಜಾಲಕಟ್ಟೆ, ಬೆಳ್ತಂಗಡಿ, ಧರ್ಮಸ್ಥಳ ಠಾಣೆಗಳಿಗೆ ದೂರು
ಮುಗ್ರೋಡಿ ಸಂಸ್ಥೆಯವರು ಪುಂಜಾಲಕಟ್ಟೆ, ಬೆಳ್ತಂಗಡಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಳವು ಕೃತ್ಯದ ಕುರಿತು ದೂರು ದಾಖಲಿಸಿದ್ದಾರೆ. ಆದರೆ ಇಲ್ಲಿಯ ತನಕ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು ಕೂಡ ತನಿಖೆಯಲ್ಲಿ ನಿರತರಾಗಿದ್ದು ೧೦ ಲಕ್ಷಕ್ಕೂ ಅಧಿಕ ಮೊತ್ತದ ವಸ್ತುಗಳನ್ನು ಕದ್ದವರನ್ನು ಕೂಡಲೇ ಹಿಡಿದು ಹೆಡೆ ಮುರಿ ಕಟ್ಟಬೇಕಿದೆ. ಇಲ್ಲವಾದರೆ ಇವರ ಕಾಟ ರಸ್ತೆ ಕಾಮಗಾರಿಗೂ ತೊಂದೆರಯುಂಟು ಮಾಡಬಹುದು.

LEAVE A REPLY

Please enter your comment!
Please enter your name here