ಬೆಳ್ತಂಗಡಿ: ದ. ಕ. ಜಿಲ್ಲಾ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಕೆ. ಹರೀಶ್ ಕುಮಾರ್ ವಿರುದ್ದ ಜ. 7 ರಂದು “ಮಹಾ ಎಕ್ಸ್ಪ್ರೆಸ್ “ವೆಬ್ ನ್ಯೂಸ್ ನಲ್ಲಿ ಹಾಲಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ರಾಜಕೀಯ ನಿವೃತಿ ಘೋಷಿಸಿದ್ದಾರೆಂದು ಸುಳ್ಳು ಸುದ್ದಿಯನ್ನು ಬಿತ್ತರಿಸಿ ಕೆ. ಹರೀಶ್ ಕುಮಾರ್ ಅಭಿಮಾನಿಗಳಲ್ಲಿ ಮತ್ತು ಕಾಂಗ್ರೇಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಸಂಶಯವನ್ನು ಉಂಟುಮಾಡುವಂತಹ ಮತ್ತು ಅವರಿಗೆ ಮಾನಹಾನಿ ಆಗುವಂತೆ ಸುದ್ದಿಯನ್ನು ಬಿತ್ತರಿಸಿದ್ದು, ಶಾಂತಿಯುತ ದಕ್ಷಿಣ ಕನ್ನಡದ ಜನರಲ್ಲಿ ಗೊಂದಲವನ್ನು ಸೃಷ್ಟಿ ಮಾಡುವಂತಹ ಕೀಲು ಮನೋಭಾವನೆಯ ಸುದ್ದಿಯನ್ನು ಹರಡಿರುತ್ತಾರೆ.
ಆದರಿಂದ ಇವರ ಮೇಲೆ ಹೇಳಿರುವಂತಹ ಪ್ರಸ್ತುತ, “ಮಹಾ ಎಕ್ಸ್ಪ್ರೆಸ್ ವೆಬ್ ನ್ಯೂಸ್” ವಿರುದ್ಧ ಸೂಕ್ತವಾದ ತನಿಖೆಯನ್ನು ಮಾಡಿ, ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಕೆ.ಪಿ.ಸಿ.ಸಿ ಸದಸ್ಯ ಕೆ. ಮೋಹನ ಶೆಟ್ಟಿಗಾರ, ಕೇಶವ ಪಿ. ಬೆಳಾಲು ಮತ್ತು ಕಾಂಗ್ರೆಸ್ ನಾಯಕರು ಜ. 8 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.