ಕಡಿರುದ್ಯಾವರ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 5 ರಂದು 65ನೇ ವಾರ್ಷಿಕೋತ್ಸವ ನಡೆಯಿತು. ಉದ್ಘಾಟನೆಯನ್ನು ಕಿಶೋರ್ ಕುಮಾರ್ ವಲಂಬ್ರ ನೆರವೇರಿಸಿದರು.
ಅಧ್ಯಕ್ಷತೆಯನ್ನು ರತ್ನಾವತಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕಡಿರುದ್ಯಾವರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸೂರಜ್ ವಲಂಬ್ರ, ಗ್ರಾಮ ಪಂಚಾಯತ್ ಸದಸ್ಯರು, ಗುರುಪ್ರಸಾದ್ ಗ್ರಾಮ ಪಂಚಾಯತ್ ಸದಸ್ಯರು, ಲಾವಣ್ಯ ಗ್ರಾಮ ಪಂಚಾಯತ್ ಸದ್ಯಸರು, ಎಸ್.ಡಿ.ಎಮ್.ಸಿ ಅಧ್ಯಕ್ಷರು ಶ್ರೀನಿವಾಸ್ ಗೌಡ, ಉಪಾಧ್ಯಕ್ಷರು ಸರಸ್ವತಿ, ಶಾಲೆಯ ಸನ್ಮಾನಿತ ಶಿಕ್ಷಕರು ಸ್ಯಾಂಡ್ರಾ ಜಿನಿವಿವ್ ಡಿಸೋಜ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಪೂಜಾರಿ, ವಾಸು ನಾಯ್ಕ್ ಶಾಲೆಯ ಹಿರಿಯ ವಿದ್ಯಾರ್ಥಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕರು ಪ್ರದೀಪ್ ಉಪಸ್ಥಿತರಿದ್ದರು.
ಶಿಕ್ಷಕಿ ಕೀರ್ತಿಕಾ ಸ್ವಾಗತಿಸಿ, ಶಿಕ್ಷಕಿ ಅನಿತಾ ನಿರೂಪಿಸಿದರು. ಬಹುಮಾನ ನಿರೂಪಣೆಯನ್ನು ಶಿಕ್ಷಕಿ ಅಸ್ಮಿತಾ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಕಲಿತು ವಿವಿಧ ಸ್ಥಾನಗಳಲ್ಲಿ ಇರುವ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ನಂತರ ಅಂಗನವಾಡಿ ಮಕ್ಕಳು ಹಾಗೂ ಶಾಲಾ ಮಕ್ಕಳಿಂದ ವಿವಿಧ ವಿನೋದವಾಳಿಗಳು ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ, ನಾಟಕ ಏರ್ಪಡಿಸಲಾಗಿತ್ತು. ಶಿಕ್ಷಕಿ ನಮಿತಾ ವಂದಿಸಿದರು.