ತಣ್ಣೀರುಪಂತ: ಸರಕಾರಿ ಉನ್ನತಿಕರಿಸಿದ ಶಾಲೆಯ ನೂತನ ವಿವೇಕ ಕೊಠಡಿ ಉದ್ಘಾಟನೆ ಮತ್ತು ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮ ಜ. 4 ರಂದು ನಡೆಯಿತು. 28 ಲಕ್ಷ ಮೊತ್ತದ ಅನುದಾನದಲ್ಲಿ ನಿರ್ಮಿಸಲಾದ ನೂತನ ವಿವೇಕ ಕೊಠಡಿಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಶುಭ ಹಾರೈಕೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಹೇಮಾವತಿ ಉಪಸ್ಥಿತರಿದ್ದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ದುರ್ಗಪ್ಪ ಗೌಡ ಪೋಸೋಂದೋಡಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ಕೊಟ್ಟರು. ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭೋತ್ಸವದಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಯಾಗಿದೆ ಎಂದು ತಿಳಿದ ಅವರು ಮಕ್ಕಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಭಾಕರ ಪೋಶನ್ಸ್ ಮಾತಾಡಿ ಮಕ್ಕಳು ಸುಸಂಸ್ಕೃತರಾಗಿ ಮುಂದಿನ ದಿನಗಳಲ್ಲಿ ಶಾಲೆಯ ಕೀರ್ತಿ ಬೆಳಗುವಲ್ಲಿ ನಿರ್ಧಾರ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ಕೇಂದ್ರದ ಸಿ. ಆರ್. ಪಿ. ಗಳಾದ ಮಹಮ್ಮದ್ ಶರೀಫ್ ಮಾತನಾಡಿ ಆಧುನಿಕ ಜೀವನ ಶೈಲಿಯ ಜೊತೆಗೆ ಸುಸಂಸ್ಕೃತ ಬದುಕು ಅಗತ್ಯ ಅದನ್ನು ಶಾಲೆಯಿಂದ ಕಲಿತುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ ಅಧ್ಯಕ್ಷ ಅಬ್ದುಲ್ ಶರೀಫ್ ವೈ. ಸಿ. ಮಾತನಾಡುತ್ತಾ ಶಾಲೆಯು ಶತಮಾನದಲ್ಲಿರುವಾಗ ನಾವೆಲ್ಲರೂ ಶಾಲೆಯ ಅಭಿವೃದ್ಧಿಯ ಚಿಂತನೆ ಮಾಡಬೇಕಿದೆ ಎಂದರು. ಸಭೆಯ ವೇದಿಕೆಯಲ್ಲಿ ಹಿರಿಯರಾದ ಆ ಕುಬ್ ಮಡೆಪಾಡಿ, ಶ್ರೀ ಶಾರದ ಭಜನಾ ಮಂಡಳಿ ಅಧ್ಯಕ್ಷ ದೇವಪ್ಪ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಯೋಗೇಶ್ ಅಳಕ್ಕೆ, ಎಸ್. ಡಿ. ಎಂ. ಸಿ. ಯ ನಿಕಟ ಪೂರ್ವ ಅಧ್ಯಕ್ಷ ಮಹಮ್ಮದ್ ಮುಸ್ತಫಾ, ಶ್ರೀಧರ ಕರ್ಕೆರ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಣ್ಣೀರುವಂತ ಅಂಗನವಾಡಿ ಅಳಕ್ಕೆ ಅಂಗನವಾಡಿ ಮತ್ತು ಕಾರ್ಪಾಡಿ ಅಂಗನವಾಡಿ ಮಕ್ಕಳಿಗೆ ಹಾಗೂ ತಣ್ಣೀರುಪಂತ ಶಾಲಾ ಮಕ್ಕಳಿಗೆ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಅದರಂತೆ ಪ್ರತಿಭೋತ್ಸವ ನಿಮಿತ್ತ ಕಲಿಕೆಯಲ್ಲಿ ಸಾಧನೆ ಮಾಡಿದವರಿಗೆ ವಿಶೇಷ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಸೇರಿದ ಎಲ್ಲರನ್ನು ಮುಖ್ಯ ಶಿಕ್ಷಕ ಪ್ರೇಮನಾಥ ಸ್ವಾಗತಿಸಿದರು. ಸರಕಾರಿ ಉನ್ನತಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನವೆಂಬರ್ ತಿಂಗಳಲ್ಲಿ ನಿವೃತ್ತಿಯಾದ ಫೆಲ್ಸಿ ಫಾತಿಮಾ ಮಾರಸ್ ಇವರನ್ನು ಶಾಲಾ ಎಸ್. ಡಿ. ಎಂ. ಸಿ ಹಾಗೂ ಪೋಷಕ ವತಿಯಿಂದ ಗೌರವಿಸಿಲಾಯಿತು. ಜೊತೆಗೆ ಈ ಶಾಲೆಯಿಂದ ವರ್ಗಾವಣೆಗೊಂಡ ಸಹ ಶಿಕ್ಷಕಿಯರಾದ ಶ್ಯಾಮಲಾ ಹಾಗೂ ರಶ್ಮಿ ಪಿ. ಎಸ್. ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಪ್ರತಿಭೋತ್ಸವ ಕಾರ್ಯಕ್ರಮದ ವೇದಿಕೆಯನ್ನು ನಿರ್ಮಿಸಿ ಉದಾರ ದೇಣಿಗೆ ನೀಡಿದ ಅಶೋಕ್ ವಜ್ರಪಲ್ಕೆ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.ಸಂಜೆಯವರೆಗೆ ಮಕ್ಕಳಿಂದ ವಿವಿಧ ಮನರಂಜನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಿಕ್ಷಕ ಉದಯ ನಿರೂಪಿಸಿದರು. ಸೇರಿದ ಎಲ್ಲರಿಗೂ ಶಿಕ್ಷಕ ರವಿ ಜೆ. ವಂದಿಸಿದರು.