p>
ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಜ. 8ರಂದು ಶ್ರೀ ಗೋಪಾಲ ಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿ ಇಲ್ಲಿ ನಡೆಯಲಿದ್ದು, ಸೌಹಾರ್ದ ಸಹಕಾರಿ ಬಂಧುಗಳ ಒಕ್ಕೂಟದ ಅಡಿಯಲ್ಲಿ ಸಾಮಾನ್ಯ ಕ್ಷೇತ್ರದಿಂದ ದಿವಾಕರ ಗೌಡ ಟಿ., ಎ. ಧರ್ಮರಾಜ ಗೌಡ, ದೊಡ್ಡಣ್ಣ ಗೌಡ, ನಾರಾಯಣ ಗೌಡ ಜಿ., ಭರತ್ ಗೊಗಟೆ, ಸಬಾಷ್ಟಿಯನ್ ಏನ್. ಎ., ಹಿಂದುಳಿದ ವರ್ಗ ಎ ಅಭ್ಯರ್ಥಿ ಪದ್ಮಪ್ಪ ಪೂಜಾರಿ, ಹಿಂದುಳಿದ ವರ್ಗ ಬಿ ಅಭ್ಯರ್ಥಿ ಸಿ. ಬಿ. ಪಿ. ವಿ ಮಹಿಳಾ ಮೀಸಲು ವಿಭಾಗದಲ್ಲಿ ಚೈತ್ರಾ ಡಿ. ಮತ್ತು ಸರಿತಾ ಭಿಡೆ, ಪರಿಶಿಷ್ಟ ಜಾತಿ ಅಡಿಯಲ್ಲಿ ಅಭ್ಯರ್ಥಿಯಾಗಿ ದಿವ್ಯಾಜ್ಯೋತಿ ಬಿ., ಪರಿಶಿಷ್ಟ ಪಂಗಡ ಅಭ್ಯರ್ಥಿ ಯಾಗಿ ಸುಂದರ ಮಲೆಕುಡಿಯ ಸ್ಪರ್ದಿಸಲಿದ್ದಾರೆ.
ಎಂದು ಒಕ್ಕೂಟದ ಮುಖ್ಯಸ್ಥ ಧರ್ಮರಾಜ್ ಗೌಡ ಅಡ್ಕಾಡಿ ತಿಳಿಸಿದ್ದು, ಈ ಭಾರಿ ನಮ್ಮ ಅಭ್ಯರ್ಥಿಗಳೆಲ್ಲ ಅತ್ಯಧಿಕ ಮತಗಳ ಅಂತರದಿಂದ 12 ಕ್ಕೆ 12 ಸ್ಥಾನಗಳಲ್ಲೂ ಜಯಗಳಿಸಳಿದ್ದೇವೆ ಎಂದಿದ್ದಾರೆ.