ಮಚ್ಚಿನ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಎಸ್‌. ಡಿ. ಪಿ. ಐ ಮನವಿ

0

p>

ಮಚ್ಚಿನ: ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಗ್ರಾಮದ 3 ನೇ ಬ್ಲಾಕಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸಿ ಮತ್ತು ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌. ಡಿ. ಪಿ. ಐ) ಮಚ್ಚಿನ ಬ್ರಾಂಚ್ ವತಿಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಜ. 3 ರಂದು ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಎಸ್‌. ಡಿ. ಪಿ. ಐ ಮಚ್ಚಿನ ಬ್ರಾಂಚ್ ಸಮಿತಿ ಅಧ್ಯಕ್ಷ ಹನೀಫ್ ಬಿ. ಎಂ., ಉಪಾಧ್ಯಕ್ಷ ಖಾಸಿಂ ಬಳ್ಳಮಂಜ, ಕಣಿಯೂರು ಬ್ಲಾಕ್ ಸದಸ್ಯರಾದ ರಝಕ್ ಬಿ. ಎಂ., ಉಸ್ಮಾನ್ ಎಂ. ಆರ್., ದಾವೂದ್ ಬಳ್ಳಮಂಜ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.

LEAVE A REPLY

Please enter your comment!
Please enter your name here