ನೆರಿಯ: ಸಿಯೋನ್ ಆಶ್ರಮ ಟ್ರಸ್ಟ್ (ರಿ.), ಗಂಡಿಬಾಗಿಲು ವತಿಯಿಂದ ಹೊಸವರ್ಷ ಸಂಭ್ರಮಾಚರಣೆ ಮತ್ತು ವಾಹನ ಚಾಲಕ – ಮಾಲಕರ ಸಂಘ ಹಾಗೂ ಗ್ರಾಮಸ್ಥರಿಂದ 12 ನೇ ವರ್ಷದ ಸ್ನೇಹಭೋಜನ ಕಾರ್ಯಕ್ರಮ ಜ. 01 ರಂದು ಆಚರಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಯು. ಸಿ. ಪೌಲೋಸ್ ವಹಿಸಿ ಹೊಸ ವರ್ಷಕ್ಕೆ ಶುಭಾಶಯಗಳನ್ನು ಹಾರೈಸಿ, ನಾವು ಯಾವುದೇ ಜಾತಿ-ಮತ, ಭೇದ-ಭಾವವಿಲ್ಲದೆ ಐಕ್ಯತೆಯಿಂದ ಒಂದಾಗಿ ಬಾಳೋಣ ಎಂದರು. ಅತಿಥಿಗಳಾಗಿ ಸಂಸ್ಥೆಯ ಹಿತೈಷಿಗಳಾದ ಡೆನ್ನಿ ತೋಟತ್ತಾಡಿ, ರಶ್ಮಿಜೋಯ್ ತೋಟತ್ತಾಡಿ, ಪ್ರಭಾ ಪಣಚಿಕಲ್ ಗಂಡಿಬಾಗಿಲು, ಮೇರಿ ಒ. ಜೆ., ಟ್ರಸ್ಟೀ ಸದಸ್ಯರುಗಳಾದ ಮೇರಿ ಯು. ಪಿ. ಮತ್ತು ಸುಭಾಷ್ ಯು. ಪಿ., ಆಶ್ರಮ ನಿವಾಸಿಗಳಾದ ಪ್ರದೀಪ್ ಮತ್ತು ಯಶೋಧ ವೇದಿಕೆಯಲ್ಲಿ ಉಪಸ್ಧರಿದ್ದರು.
ಸಿಯೋನ್ ಆಶ್ರಮ ನಿವಾಸಿಗಳಿಗೋಸ್ಕರ ವಾಹನ ಚಾಲಕ – ಮಾಲಕರ ಸಂಘ ಹಾಗೂ ಗ್ರಾಮಸ್ಥರು ಪ್ರತೀ ವರ್ಷ ಜ. 1 ರಂದು 1 ದಿನದ ಅನ್ನದಾನ ನೀಡುತ್ತಿದ್ದು, ಈ ಕಾರ್ಯಕ್ರಮದ ಮುಂದಾಳತ್ವವನ್ನು ಸಂಸ್ಥೆಯ ಹಿತೈಷಿ ಜೋಸೆಫ್ ಪರುವಕಾರನ್ ಮತ್ತು ಡೆನ್ನಿಯವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟೀ ಸದಸ್ಯರುಗಳು, ಕುಟುಂಬಸ್ಥರು, ಸಿಬ್ಬಂದಿ ವರ್ಗದವರು, ಆಶ್ರಮ ನಿವಾಸಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿ ಅಕ್ಷತಾ ಸ್ವಾಗತಿಸಿ, ಸಿಬ್ಬಂದಿ ದಿನವತಿ ಕಾರ್ಯಕ್ರಮ ನಿರೂಪಿಸಿದರು.