p>
ಬೆಳ್ತಂಗಡಿ: ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುದೆಮುಗೇರು ನೂತನ ಅಂಗನವಾಡಿ ಕೇಂದ್ರಕ್ಕೆ ಹೊಸ ವರ್ಷದ ಶುಭ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಮತ್ತು ಡಾ. ಬಿ. ಆರ್ ಅಂಬೇಡ್ಕರ್ ಭಾವಚಿತ್ರವನ್ನು ಪಟ್ಟಣ ಪಂಚಾಯತ್ ಸದಸ್ಯ ಮತ್ತು ತಾಲೂಕು ಕೆ. ಡಿ. ಪಿ. ಸದಸ್ಯ ಜಗದೀಶ್ ಡಿ. ಹಸ್ತಾಂತರ ಮಾಡಿದರು.
ಪುಟಾಣಿ ಮಕ್ಕಳಿಗೆ ಸಿಹಿ ತಿಂಡಿಗಳನ್ನು ನೀಡಿ ಹೊಸ ವರ್ಷದ ಶುಭಾಶಯಗಳು ತಿಳಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ದಿವ್ಯಶೇಖರ್ ಮತ್ತು ಸಹಾಯಕಿ ರೋಹಿಣಿ ಹಾಗೂ ಹಿರಿಯ ನಾಗರಿಕರಾದ
ಸಿ ಎಮ್ ಮ್ಯಾಥ್ಯೂ ಉಪಸ್ಥಿತರಿದ್ದರು.