p>
ಬೆಳ್ತಂಗಡಿ: ಉಜಿರೆ ಗ್ರಾಮ ವ್ಯಾಪ್ತಿಯ ಟಿ. ಬಿ ಕ್ರಾಸ್ ನಿಂದ ಕುತ್ರೊಟ್ಟುವರೆಗೆ ಸಂಪರ್ಕಿಸುವ ರಸ್ತೆಯ ಚರಂಡಿ ವ್ಯವಸ್ಥೆ, ಕಾಂಕ್ರೀಟ್ ರಸ್ತೆ ಮಾಡಿಕೊಡುವಂತೆ ಆಗ್ರಹಿಸಿ ಎಸ್. ಡಿ. ಪಿ. ಐ ಕುಂಟಿನಿ ಬ್ರಾಂಚ್ ಸಮಿತಿ ವತಿಯಿಂದ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಬಕ್ಕಪ್ಪ ಎಚ್ (ಬಿ. ಇ)ರವರಿಗೆ ಜ.1 ರಂದು ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಎಸ್. ಡಿ. ಪಿ. ಐ ಕುಂಟಿನಿ ಬ್ರಾಂಚ್ ಅಧ್ಯಕ್ಷರು ಆಸೀರ್ ಕುಂಟಿನಿ, ಉಜಿರೆ ಬ್ಲಾಕ್ ಅಧ್ಯಕ್ಷರು ಮೊಹಮ್ಮದ್ ಅಲಿ, ಗ್ರಾಮ ಪಂಚಾಯತ್ ಸದಸ್ಯ ಸಲೀಂ ಕುಂಟಿನಿ, ಎಸ್. ಡಿ. ಟಿ. ಯು ಆಟೋ ಯೂನಿಯನ್ ಹಳೆಪೇಟೆ ಅಧ್ಯಕ್ಷ ಶರೀಫ್ ಎಸ್. ಎಂ., ಸಾಲಿ ಅತ್ತಾಜೆ, ಅಝೀಝ್ ಕುಂಟಿನಿ, ಇಕ್ಬಾಲ್ ಕುಂಟಿನಿ, ಮೊಹಮ್ಮದ್ ಮುಗುಳಿ, ಖಾದರ್ ನಾಡ್ಜೆ, ಸಾದಿಕ್ ಅತ್ತಾಜೆ, ಅಫ್ರಾನ್ ಕುಂಟಿನಿ, ಫಾಝಿಲ್ ಕುಂಟಿನಿ ಉಪಸ್ಥಿತರಿದ್ದರು.
ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಬಕ್ಕಪ್ಪ ಎಚ್. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.