p>
ಸೋಣಂದೂರು: ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ಪಣಕಜೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಉಳಿಕೆಯಾದ ಹಣವನ್ನು ತೀವ್ರ ಬಡ ಕುಟುಂಬಕ್ಕೆ ಅಕ್ಕಿ ಹಾಗೂ ಧನ ಸಹಾಯ ನೀಡುವ ಮೂಲಕ ಸಂಘಟನೆಯ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಲೀಯೋ ಡಿಸೋಜ ಪಣಕಜೆ, ಸತೀಶ್ ಪೂಜಾರಿ ಪರಗುಡ್ಡೆ, ಮಹಮ್ಮದ್ ಪೂಮ್ಮಾಜೆ, ಸುಶೀಲಾ ಆಚಾರ್ಯ ಪಣಕಜೆ ಇವರ ಮನೆಗೆ ಭೇಟಿ ನೀಡಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.