ಕಕ್ಕಿಂಜೆ: ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಲ್ಲುಪುರಂ ರಸ್ತೆಯ ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಕ್ಕಿಂಜೆ ಪೇಟೆಯ ಮೂಲಕವೇ ರಸ್ತೆಯ ಹಾದು ಹೋಗಬೇಕು ಎಂದು ಕಕ್ಕಿಂಜೆಯಲ್ಲಿ ಸಾರ್ವಜನಿಕರು ಗ್ರಾಮ ಪಂಚಾಯತ್ ನಿರ್ಣಯದಂತೆ ಹೆದ್ದಾರಿಯ ಮುಖ್ಯ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು.
ಡಿ. 11 ರಂದು ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೇ ಶಾರದರವರ ಅಧ್ಯಕ್ಷೆಯಲ್ಲಿ ನಡೆದ ಸಾಮಾನ್ಯ ನಿರ್ಣಯದಂತೆ ಮನವಿ ಸಲ್ಲಿಸುವುದು ತೀರ್ಮಾನಿಸಲಾಗಿತ್ತು.
ಈ ಇರುವ ಪೇಟೆಯ ಹಿಂದಿನ ಜಾಗದಿಂದ ಪೇಟೆ ಬಿಟ್ಟು ರಸ್ತೆಯ ಸರ್ವೆ ಕಾರ್ಯ ನಡೆಸಿದ್ದು ಸದ್ರಿ ರಸ್ತೆಯನ್ನು ಕಕ್ಕಿಂಜೆ ಪೇಟೆ ಮುಖಾಂತರ ಹಾದು ಹೋಗುವಂತೆ ಗ್ರಾಮಸ್ಧರು ಮನವಿ ಮಾಡಿದರು.
ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಶಾಲೆ, ಕಾಲೇಜು, ಹಾಲಿನ ಡೈರಿ, ಮಂದಿರ, ಮಸೀದಿ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕಕ್ಕಿಂಜೆ ಪೇಟೆಯ ಮೂಲಕ ರಸ್ತೆ ಅಭಿವೃದ್ಧಿ ಆಗಬೇಕು ಎಂದು ಸಾರ್ವಜನಿಕರು ಮುಖ್ಯ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದ್ದರು.