ಬೆಳ್ತಂಗಡಿ: ಡಿ. 28 ರಂದು ತೋಟತಾಡಿ ಸೈoಟ್ ಸಾವಿಯೋ ಸ್ಕೂಲ್ ಮೈದಾನದಲ್ಲಿ ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ( ಕೆ. ಎಸ್. ಎಂ. ಸಿ. ಎ ) (ರಿ) ವತಿಯಿಂದ ಡಿ. 28 ರಂದು “ಕ್ರಿಸ್ಮಸ್ ಕಪ್ – 24” ವಾಲಿಬಾಲ್ ಪಂದ್ಯಾಟ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಯನ್ನು ನಡಸಲಾಯಿತ್ತು.
ವಿಜೇತರಿಗೆ ಬಹುಮಾನ ವಿತರಣೆಯನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಬಿಷಪ್ ಲೋರೆನ್ಸ್ ಮುಕ್ಕುಯಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡೆ ಮತ್ತು ಪಂದ್ಯಾಟದಲ್ಲಿ ಭಾಗವಹಿಸುವುದರ ಮೂಲಕ ಪರಸ್ಪರ ಪ್ರೀತಿ, ಸಹೋದರ್ಯತೆ, ಒಗ್ಗಟ್ಟು ಪರಸ್ಪರ ವಿಶ್ವಾಸವನ್ನು ಬೆಳಸುವಾಗ ಆರೋಗ್ಯಯುತ ಸಮಾಜ ನಿರ್ಮಾಣವಾಗಲಿದೆ ಎಂದರು.
ಕೆ. ಎಸ್. ಎಂ. ಸಿ. ಎ ನಿರ್ದೇಶಕರು ಫಾ. ಆದರ್ಶ್ ಜೋಸೆಫ್, ಅಧ್ಯಕ್ಷರು ಬಿಟ್ಟಿ ನೆಡುನಿಲಂ, ಪಂದ್ಯಾಟದ ಸಂಯೋಜಕರು ಜಾರ್ಜ್ ಟಿ. ವಿ. ಕೇಂದ್ರೀಯ ಸಮ್ಮಿತಿ ಸದಸ್ಯರು, ಸಂಘಟನೆಯ ವಲಯ ಅಧ್ಯಕ್ಷರುಗಳು, ಪ್ರಾಥಮಿಕ ಘಟಕದ ಅಧ್ಯಕ್ಷರುಗಳು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಕ್ರಿಸ್ಮಸ್ ಕಪ್ 24, ವಾಲಿಬಾಲ್ ಪಂದ್ಯಾಟವನ್ನು ಸೈoಟ್ ಸಾವಿಯೋ ಸ್ಕೂಲ್ ಮುಖ್ಯೋಪಾಧ್ಯಾಯ ಸಿಸ್ಟೆರ್ ಮರಿಯಾ ಎಫ್. ಸಿ. ಸಿ ಉದ್ಘಾಟನೆ ಮಾಡಿದರು.
ಪಂದ್ಯಾಟದಲ್ಲಿ ವಾಲಿಬಾಲ್ ಪ್ರಥಮ ಸ್ಥಾನವನ್ನು ಸೈoಟ್ ಸೇಬಾಸ್ಟಿಯನ್ ಚರ್ಚ್ ಕಳಂಜ, ದ್ವಿತೀಯ ಸ್ಥಾನವನ್ನು ಸೈoಟ್ ಅಂಟನಿ ಚರ್ಚ್ ತೋಟತಾಡಿ, ತೃತೀಯ ಸ್ಥಾನವನ್ನು ಸೈoಟ್ ಜೋರ್ಜ್ ಚರ್ಚ್ ಜಡಿಕಲ್ ಪಡೆದುಕೊಂಡರು.
ಪುರುಷರ ಹಗ್ಗ – ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮೂದುರು, ತೃತೀಯ ಬಜಗೋಳಿ ಪಡೆದುಕೊಂಡರು. ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಬಜಗೋಳಿ, ದ್ವಿತೀಯ ತೋಟತಾಡಿ, ತೃತೀಯ ಧರ್ಮಸ್ಥಳ ಪಡೆದುಕೊಂಡರು. ರಾಬಿನ್ ಹಾಗೂ ವಿಜೇಶ್ ಕಾರ್ಯಕ್ರಮ ನಿರೂಪಿಸಿದರು.