p>
ಶಿಶಿಲ: ಶ್ರೀ ದುರ್ಗಾ ಪರಮೇಶ್ವರಿ ಯುವಕ ಮಂಡಲದ ರಜತ ಮಹೋತ್ಸವ ಪೂರ್ವಭಾವಿ ಸಭೆ ಮತ್ತು ಸಮವಸ್ತ್ರ ಬಿಡುಗಡೆ ಸಮಾರಂಭ ಡಿ. 29 ರಂದು ನಡೆಯಿತು. ಈ ಸಂಧರ್ಭದಲ್ಲಿ ಯುವಕ ಮಂಡಲದ ಗೌರವ ಸಲಹೆಗಾರರಾದ ಸುಂದರ ಕೆ., ಚೆನ್ನಪ್ಪ ಕೆ. ಎಂ., ಮುತ್ತಪ್ಪ ಕೊಳಂಬೆ, ಉಪಾಧ್ಯಕ್ಷ ಕಿರಣ್ ಸಂಕೇಶ ಉಪಸ್ಥಿತರಿದ್ದರು.
ಪ್ರಥಮ ಸಮವಸ್ತ್ರವನ್ನು ಮಾ. ಹಂಶಿತ್ ಹಾಗೂ ಚೆನ್ನಪ್ಪ ಕೆ. ಎಂ. ಇವರಿಗೆ ನೀಡಲಾಯಿತು. ಕಾರ್ಯದರ್ಶಿ ವಿವೇಕಾನಂದ ಸರ್ವರನ್ನೂ ಸ್ವಾಗತಿಸಿ ವಂದಿಸಿದರು.