ಬೆಳ್ತಂಗಡಿ: ಕುತ್ಯಾರು ಹೊಸಮನೆ ರೆಂಕೆದಗುತ್ತು ಶ್ರೀ ಸಪರಿವಾರ ನಾಗಬ್ರಹ್ಮಾದಿ ಕ್ಷೇತ್ರದಲ್ಲಿ ಡಿ. 28 ರಿಂದ 29 ರ ತನಕ 12 ನೇ ವರ್ಷದ ಶ್ರೀ ಗಣಪತಿ ದುರ್ಗಾ ಮತ್ತು ಶ್ರೀ ನಾಗದೇವರ ಸಾನಿಧ್ಯ ಕಲಶಾಭಿಷೇಕದ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯಾಯಿತು.
ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದಿಂದ ಕ್ಷೇತ್ರದ ಸನ್ನಿಧಾನದವರೆಗೆ ವೈಭವಯುತ ಮೆರವಣಿಗೆಯೊಂದಿಗೆ ಹಸಿರುವಾಣಿ ಹೊರೆಕಾಣಿಕೆ ನಡೆಯಿತು. ಹೊರೆಕಾಣಿಕೆ ಸಮರ್ಪಣೆಯ ಉದ್ಘಾಟನೆಯನ್ನು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿಯವರು ನೆರವೇರಿಸಿದರು.
ಸಂಜೆ 5 ಗಂಟೆಯಿಂದ ಪುಣ್ಯಾಹ ಸಪ್ತಶುದ್ಧಿ, ಸುದರ್ಶನ ಹೋಮ, ದುರ್ಗಾ ಪೂಜೆ, ವಾಸ್ತು ಪೂಜೆ ವಾಸ್ತು ಬಲಿ, ಸಂಜೆ 6 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ಜರಗಿತು.
ಡಿ. 29 ರಂದು ಬೆಳಿಗ್ಗೆ 7 ರಿಂದ ವಿವಿಧ ಪೂಜಾ ಕಾರ್ಯಕ್ರಮ ಹಾಗೂ ಬೆಳಿಗ್ಗೆ 10 ರಿಂದ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ನಾಗಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕಿರಣ್ ಕುಲಾಲ್ ತಿಳಿಸಿದರು.