ವೇಣೂರು: ಸುದ್ದಿ ಬಿಡುಗಡೆ ಮತ್ತು ಇತರ ಪತ್ರಿಕೆಗಳ ಹಿರಿಯ ವಿತರಕ, ವ್ಯಾಪಾರಿ ನಾರಾಯಣ ಕನಡ ಮತ್ತು ವಾರಿಜ ದಂಪತಿಯ ವೈವಾಹಿಕ ಸುವರ್ಣ ಮಹೋತ್ಸವ ಸಂಭ್ರಮ ಡಿ. 29 ರಂದು ವೇಣೂರು ಬಾಹುಬಲಿ ಸಭಾಂಗಣದಲ್ಲಿ ನಡೆಯಿತು.
ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಉಜಿರೆ ಎಸ್. ಡಿ. ಎಂ. ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕ
ಕಜೆ ಸುಬ್ರಹ್ಮಣ್ಯ ಭಟ್, ಅಂಡಿಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಅಂಡಿಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ
ಮೋಹನ ಅಂಡಿಂಜೆ, ವೇಣೂರು ಪಲ್ಗುಣಿ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಜಯರಾಜ್ ವಿ . ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ವೇಣೂರು ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿದಿನಗಳು, ವರ್ತಕರು, ಕುಟುಂಬಸ್ಥರು, ಅಭಿಮಾನಿಗಳು ಹಾಜರಿದ್ದು ಶುಭ ಕೋರಿದರು.
ಮಕ್ಕಳಾದ ಸತೀಶ್ ಕೆ., ರಮೇಶ್ ಕೆ. ಎನ್., ಮಲ್ಲಿಕಾ, ಅಳಿಯ ವಸಂತ ಕುಮಾರ್, ಸೊಸೆಯಂದಿರಾದ ಪ್ರಮೀಳಾ, ಶರ್ಮಿಳಾ, ಬಂಧು ಮಿತ್ರರು ಸಹಕರಿಸಿದರು.
ಕಾರ್ಯಕ್ರಮದ ಮೊದಲು ಕಲ್ಲಡ್ಕ ವಿಠ್ಠಲ ನಾಯಕ್ ರವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.
ಅವರ ಮೊಮ್ಮಕ್ಕಳು ಪ್ರಾರ್ಥಿಸಿದರು. ಹಿರಿಯ ಪುತ್ರ
ಸತೀಶ್ ಕೆ. ಸ್ವಾಗತಿಸಿದರು. ಉಪನ್ಯಾಸಕ ಮಹಾವೀರ ಜೈನ್ ನಿರೂಪಿಸಿದರು.