




ಓಡಿಲ್ನಾಳ: ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ರಾಮನಗರ ಮೈರಲ್ಕೆ ಓಡಿಲ್ನಾಳದಲ್ಲಿ ವೇದಮೂರ್ತಿ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಡಿ. 28 ರಿoದ ಜ. 1 ರವರೆಗೆ ನಡೆಯುವ ವರ್ಷಾವಧಿ ಜಾತ್ರೋತ್ಸವ ಡಿ. 28 ರoದು ಪ್ರಾರಂಭಗೊಂಡಿದ್ದು, ಬೆಳಿಗ್ಗೆ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ತಂತ್ರಿಗಳ ಆಗಮನ ತೋರಣ ಮುಹೂರ್ತ ಧ್ವಜಾರೋಹಣ ನೆರವೇರಿತು.



ಪೂಜಾ ವಿಧಿ ವಿಧಾನಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ಪ್ರಸನ್ನ ಭಟ್ ನೆರವೇರಿಸಿದರು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್ಯಾರು ಹಾಗೂ ಪದಾಧಿಕಾರಿಗಳು ಜಾತ್ರೋತ್ಸವದ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.








