‘ಪಟ್ಲ ಪ್ರತಿಷ್ಠಾನ’ದ ದಶಮಾನೋತ್ಸವ – ಉದ್ಯಮಿ ಶಶಿಧರ್ ಶೆಟ್ಟಿ ಬರೋಡ 1 ಕೋಟಿ ರೂ. ದೇಣಿಗೆ

0

p>

ಬೆಳ್ತಂಗಡಿ: ಯಕ್ಷ ದ್ರುವ ಪಟ್ಲ ಫೌಂಡೇಷನ್ ನ ದಶಮಾನೋತ್ಸವ ಪ್ರಯುಕ್ತ ಮಂಗಳೂರಿನಲ್ಲಿ ಸಮಾಲೋಚನಾ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬೆಳ್ತಂಗಡಿ ಯಕ್ಷದ್ರುವ ಪಟ್ಲ ಘಟಕದ ಗೌರವಾಧ್ಯಕ್ಷ ಹಾಗೂ ಉದ್ಯಮಿಗಳಾಗಿರುವ ಶಶಿಧರ್ ಶೆಟ್ಟಿಯವರು ಪಟ್ಲ ಫೌಂಡೇಶನ್ ಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪಟ್ಲ ಸತೀಶ್ ಅವರು ಯಕ್ಷಗಾನ ಕಲಾವಿದರಿಗಾಗಿ ಬಹಳ ಕಷ್ಟ ಪಟ್ಟು ಸಂಘಟನೆ ಕಟ್ಟಿದ್ದಾರೆ. ಇದಕ್ಕಾಗಿ ದಾನಿಗಳ ನೆರವಿನಿಂದ 10 ಕೋಟಿ ರೂ. ಸಂಗ್ರಹಿಸಿ ಅದನ್ನು ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಪ್ರತಿವರ್ಷ ಕಲಾವಿದ ಅಭ್ಯುದಯಕ್ಕಾಗಿ ಕಾರ್ಯಕ್ರಮ ರೂಪಿಸುವಂತಾಗಬೇಕು. ಇದಕ್ಕಾಗಿ ದಾನಿಗಳು ಒಕ್ಕೊರಳಿನಿಂದ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

LEAVE A REPLY

Please enter your comment!
Please enter your name here