p>
ಬೆಳ್ತಂಗಡಿ: ಕೊಯ್ಯುರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆದರ್ಶ ನಗರ 5 ಸೆನ್ಸ್ ಕಾಲೋನಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು 15 ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕುರಿತು ಐ. ಇ. ಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭ ತಾಲೂಕು ನರೇಗಾ ಐ. ಇ. ಸಿ ಸಂಯೋಜಕರು ವಿನಿಷ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಗ್ರಾ. ಪಂ. ಸಿಬ್ಬಂದಿಗಳಾದ ಒಬ್ಬಯ್ಯ, ಶೋಭ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಲಾವಣ್ಯ, ಕು. ದೀಪ್ತಿ ಉಪಸ್ಥಿತರಿದ್ದರು.