ಶಿಬರಾಜೆ: ಜೆ. ಸಿ. ಐ ಕೊಕ್ಕಡ ಕಪಿಲಾ ಘಟಕದ 2025 ರ ಸಾಲಿನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಗ್ರಾಮಬ್ಯುದಯ ಅನುಷ್ಠಾನ ಸಮಿತಿಯ ಸಭಾಂಗಣದಲ್ಲಿ ಡಿ. 22 ರಂದು ನೆರವೇರಿತು.
ಜೆ. ಸಿ. ಐ ನಿಕಟಪೂರ್ವ ಅಧ್ಯಕ್ಷ ಸಂತೋಷ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ವಿದ್ಯಾ ಕೆ. ಮತ್ತು ಜೆ. ಸಿ. ಐ ಸೆನ್ ಸುಹಾಸ್ ಎ. ಪಿ. ಎಸ್. ಮರಿಕೆ ನೆರವೇರಿಸಿದರು.
ಈ ಸಂಧರ್ಭದಲ್ಲಿ 2023 ರ ಜೆ. ಸಿ. ಐ ಕೊಕ್ಕಡ ಕಪಿಲಾ ಘಟಕದ ಅಧ್ಯಕ್ಷ ಜಸ್ವಂತ್ ಪಿರೇರಾ, ಸಮಾಜಸೇವಕ ರೈಮಂಡ್ ಗಲ್ಬಾoವೋ, ಉರಗ ತಜ್ಞ ರಜನಿಕಾಂತ್, ಹಾಗೂ ಥ್ರೋಬಾಲ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸಾಹಿತ್ಯ ಕುಶಾಲ್ ರವರನ್ನು ಸನ್ಮಾನಿಸಲಾಯಿತು.
ಜೆ. ಸಿ. ಐ ನಿಯೋಜಿತ ಕಾರ್ಯದರ್ಶಿ ಚಂದನಾ ಪಿ., ಕಾರ್ಯದರ್ಶಿ ಜೆ. ಸಿ. ಅಕ್ಷತ್ ರೈ, ಲೇಡಿ ಜೆ. ಸಿ. ನಿಯೋಜಿತ ಅಧ್ಯಕ್ಷೆ ರೇಷ್ಮಾ ಡಿ. ಅಲ್ಮೆಡ, ಜೂನಿಯರ್ ಜೆ. ಸಿ. ನಿಯೋಜಿತ ಅಧ್ಯಕ್ಷ ಶ್ರವಣ್, ಜೂನಿಯರ್ ಜೆ. ಸಿ. ಅಧ್ಯಕ್ಷ ಹರ್ಷಿತ್, ಜೆ. ಸಿ. ಎಲ್. ಟಿ. ನಿಯೋಜಿತ ಅಧ್ಯಕ್ಷ ದಕ್ಷ ಜೈನ್ ಜೆ. ಸಿ. ಎಲ್. ಟಿ ಅಧ್ಯಕ್ಷ ವಿವಿಯನ್ ಸುವಾರಿಸ್, ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಜೆ. ಎಫ್. ಎಂ. ಶ್ರೀಧರ್ ರಾವ್, ಜೆ. ಸಿ. ವಾಣಿಯನ್ನು ಧನುಷ್, ಸ್ವಾಗತ ಮತ್ತು 2024 ರ ವರದಿಯನ್ನು ನಿರ್ಗಮಿತ ಅಧ್ಯಕ್ಷ ಸಂತೋಷ ಜೈನ್ ನೆರವೇರಿಸಿದರು. ಮುಖ್ಯ ಅಥಿತಿಗಳ ಪರಿಚಯವನ್ನು ಪ್ರಿಯ ಜೆ. ಅಮೀನ್ ಮತ್ತು ಜಸ್ವಂತ ಪಿರೇರಾ ನಡೆಸಿಕೊಟ್ಟರು. ಜೆ. ಸಿ. ಚಂದನ ಧನ್ಯವಾದವಿತ್ತರು.