ಬಾಂಜಾರು ಕಾಲೋನಿಯ 37 ಮಲೆಕುಡಿಯ ಕುಟುಂಬಗಳ ವಿರುದ್ಧದ ರಿಟ್ ಅರ್ಜಿ ವಾಪಸ್ ಪಡೆಯಲು ವಿಧಾನ ಪರಿಷತ್‌ನ ಶೂನ್ಯವೇಳೆಯಲ್ಲಿ ಸದಸ್ಯ ಬಿ. ಕೆ. ಹರಿಪ್ರಸಾದ್ ಆಗ್ರಹ

0

p>

ಬೆಳ್ತಂಗಡಿ: ಮಲೆಕುಡಿಯ ಜನಾಂಗ ವಾಸಿಸುವ ಬಾಂಜಾರು ಮಲೆಕುಡಿಯ ಸಮುದಾಯದ ಕಾಲೋನಿಯ 37 ಕುಟುಂಬಗಳಿಗೆ ಮಂಜೂರಾಗಿರುವ ಜಮೀನಿನ ವಿರುದ್ಧ ರಾಜ್ಯ ಸರ್ಕಾರ ದಾಖಲಿಸಿರುವ ರಿಟ್ ಅರ್ಜಿಯನ್ನು ಹಿಂಪಡೆದು ಈ ಸಮುದಾಯದ ಜನರ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು ಎಂದು ವಿಧಾನ ಪರಿಷತ್‌ನ ಶೂನ್ಯವೇಳೆಯಲ್ಲಿ ಸದಸ್ಯ ಬಿ. ಕೆ. ಹರಿಪ್ರಸಾದ್ ಸರಕಾರದ ಗಮನ ಸೆಳೆದಿದ್ದಾರೆ.

ಗಮನ ಸೆಳೆದ ಬಿ. ಕೆ. ಹರಿಪ್ರಸಾದ್: ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆಕುಡಿಯ ಕಾಲೋನಿಯಲ್ಲಿ 47 ಕುಟುಂಬಗಳು ವಾಸಿಸುತ್ತಿದೆ. ಯೆನೆಪೋಯ ಮೊಹಿದ್ದಿನ ಕುಂಞ ಆಂಡ್ ಕಂಪನಿ ನೆರಿಯ ಗ್ರಾಮದಲ್ಲಿ ಒಟ್ಟು4028 ಎಕರೆ ಜಮೀನು ಹೊಂದಿದೆ. ಇದರಲ್ಲಿ 368 ಎಕರೆ ಜಮೀನು ಹೆಚ್ಚುವರಿ ಹೊಂದಿರುವುದಾಗಿ ಬೆಳ್ತಂಗಡಿ ಭೂನ್ಯಾಯ ಮಂಡಳಿ ತೀರ್ಪು ನೀಡಿದೆ.

ಈ ತೀರ್ಪಿನ ವಿರುದ್ಧ ಭೂಮಾಲೀಕರ ಸಂಸ್ಥೆ ಹಾಗೂ ರಾಜ್ಯ ಸರ್ಕಾರ ಸಲ್ಲಿಸಿದ ರಿಟ್ ಅರ್ಜಿಗಳನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿರುವುದು ತಿಳಿದು ಬಂದಿರುತ್ತದೆ. ನಂತರದಲ್ಲಿ ಸರ್ಕಾರ ರಿಟ್ ಪಿಟಿಷನ್ ಆದೇಶದ ವಿರುದ್ಧ ರಿವ್ಯೂ ಪಿಟಿಷನ್ ಸಲ್ಲಿಸಿ ಹೈಕೋರ್ಟ್‌ನಲ್ಲಿ ತಿರಸ್ಕೃತವಾದ ಕಾರಣ ಸುಪೀಂಕೋರ್ಟ್ ನಲ್ಲಿ ಸ್ಪೆಷಲ್ ಲಿವ್ ಪಿಟಿಷನ್ ದಾಖಲಿಸಿರುತ್ತದೆ. ಮೊಹಿದ್ದಿನ್ ಕುಂಞ ಆಂಡ್ ಕಂಪನಿಯವರು ಕರ್ನಾಟಕ ಭೂ ಸುಧಾರಣಾ ಕಾಯ್ದೆಯಂತೆ ಹೆಚ್ಚುವರಿ ಜಮೀನನ್ನು ಸರ್ಕಾರದ ವಶಕ್ಕೆ ಒಪ್ಪಿಸಬೇಕಾಗಿರುವುದರಿಂದ ಗೇಣಿದಾರರಲ್ಲದ ತಮ್ಮದೇ ವಲಯದ 53 ಜನರಿಗೆ 537 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಳ್ಳಲಾಗಿರುತ್ತದೆ ಎನ್ನುವುದು ಸರ್ಕಾರದ ವಾದವಾಗಿದೆ.

ಭೂ ನ್ಯಾಯ ಮಂಡಳಿಯಿಂದ ಮಂಜೂರಾಗಿರುವ ಜಮೀನನ್ನು ರದ್ದುಗೊಳಿಸಲು ಪ್ರಯತ್ನ ನಡೆಸಿರುತ್ತದೆ. ಆದರೆ ಮಲೆಕುಡಿಯ ಜನಾಂಗ ವಾಸಿಸುವ ಬಾಂಜಾರು ಮಲೆಕುಡಿಯ ಸಮುದಾಯ ಕಾಲೋನಿಯ37 ಕುಟುಂಬಗಳಿಗೆ ಮಂಜೂರಾಗಿರುವ ಜಮೀನಿನ ವಿರುದ್ಧ ರಾಜ್ಯ ಸರ್ಕಾರ ದಾಖಲಿಸಿರುವ ರಿಟ್ ಅರ್ಜಿಯನ್ನು ಹಿಂಪಡೆದು ಈ ಸಮುದಾಯದ ಜನರ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು ಎಂದು ವಿಧಾನ ಪರಿಷತ್‌ನ ಶೂನ್ಯವೇಳೆಯಲ್ಲಿ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಸರಕಾರದ ಗಮನ ಸೆಳೆದಿದ್ದಾರೆ.

ಹರಿಪ್ರಸಾದ್‌ಗೆ ಮನವಿ ಸಲ್ಲಿಕೆಯಾಗಿತ್ತು: ಮಲೆಕುಡಿಯ ಜನಾಂಗ ವಾಸಿಸುವ ಬಾಂಜಾರು ಮಲೆಕುಡಿಯ ಸಮುದಾಯ ಕಾಲೋನಿಯ 37 ಕುಟುಂಬಗಳಿಗೆ ಮಂಜೂರಾಗಿರುವ ಜಮೀನಿನ ವಿರುದ್ಧ ರಾಜ್ಯ ಸರ್ಕಾರ ದಾಖಲಿಸಿರುವ ರಿಟ್ ಅರ್ಜಿಯನ್ನು ಹಿಂಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಅವರು ಯುವವಾಹಿನಿ ಘಟಕದ ವತಿಯಿಂದ ಬೆಳ್ತಂಗಡಿಯಲ್ಲಿ ನಡೆದಿದ್ದ ಡೆನ್ನಾನ ಡೆನ್ನಾನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸಮುದಾಯದವರ ಪರವಾಗಿ ಶೇಖರ ಲಾಯಿಲ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿತ್ತು.

p>

LEAVE A REPLY

Please enter your comment!
Please enter your name here