ಡಿ. 22: ಅಖಿಲ ಭಾರತ ಸಾಹಿತ್ಯ ಪರಿಷತ್ ಕರ್ನಾಟಕ – ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ತೆಂಕಣದಲ್ಲಿ ನುಡಿ ದಿಬ್ಬಣ ತಾಲೂಕು ಅಧಿವೇಶನ – ಪತ್ರಿಕಾ ಗೋಷ್ಠಿ

0

p>

ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ, ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಪ್ರಥಮ ತಾಲೂಕು ಅಧಿವೇಶನ ಡಿ. 22ರಂದು ನಡ ಕುತ್ರೋಟ್ಟು ಮಡಿಲಿನಲ್ಲಿರುವ ನರಸಿಂಹ ಘಢದ (ಗಡಾಯಿಕಲ್ಲಿನ) ಬಲಿಪ ರೆಸಾರ್ಟ್‌ನಲ್ಲಿ ನಡೆಯಲಿದೆ ಎಂದು ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ ಹೇಳಿದರು. ಅವರು ಡಿ. 17 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ನಿವೃತ್ತ ಲೋಕಾಯುಕ್ತ ಎಸ್ಪಿ ಕುಮಾರಸ್ವಾಮಿ ಎ. ಉದ್ಘಾಟಿಸಲಿದ್ದಾರೆ. ಈ ಅಧಿವೇಶನವನ್ನು ತಾಲೂಕು ಸಮಿತಿಯ ಅಧ್ಯಕ್ಷರಾಗಿ ಪ್ರೊ.ಗಣಪತಿ ಭಟ್ ಕುಳಮರ್ವ, ಕಾರ್ಯದರ್ಶಿಯಾಗಿ ಸುಭಾಷಿಣಿ, ಕೋಶಾಧಿಕಾರಿಯಾಗಿ ಕೇಶವ ಭಟ್, ಉಪಾಧ್ಯಕ್ಷರಾಗಿ ವಿಶ್ವೇಶ್ವರಭಟ್ ಉಂಡೆಮನೆ, ರಾಮಕೃಷ್ಣಭಟ್ ಬದನಾಜೆ, ಜತೆ ಕಾರ್ಯದರ್ಶಿಯಾಗಿ ವಿನುತಾ ರಜತ್ ಗೌಡ, ನಾರಾಯಣ ಫಡೈ, ಮಾಧ್ಯಮ ಪ್ರಮುಖ ಶ್ರೀನಿವಾಸ್ ತಂತ್ರಿ, ಸಾಹಿತ್ಯಕೂಟ ಪ್ರಮುಖ ಆಗಿ ರಾಮಕೃಷ್ಣ ಭಟ್ ಬೆಳಾಲು, ವಿದ್ಯಾರ್ಥಿ ಪ್ರಕಾರಪ್ರಮುಖ ಆಗಿ ಮಹಾಬಲ ಗೌಡ, ಮಕ್ಕಳಪ್ರಕಾರ ಪ್ರಮುಖ ಆಗಿ ಮೇಧಾ, ಮಹಿಳಾಪ್ರಕಾರ ಪ್ರಮುಖ ಆಗಿ ವಿದ್ಯಾಶ್ರೀ ಅಡೂರು, ಕಾರ್ಯಕಾರಿಣಿ ಸದಸ್ಯರಾಗಿ ಗುರುನಾಥ್ ಪ್ರಭು, ಡಾ ಪ್ರದೀಪ್ ನಾವೂರ, ವನಜಾ ಜೋಷಿಯವರು ಜವಾಬ್ದಾರಿಯನ್ನು ನಿರ್ವಹಿಸುತ್ತಾ ಇದ್ದಾರೆ.

2017ರಲ್ಲಿ ಅಭಾಸಾಪ ಸಮಿತಿಯು ಬೆಳ್ತಂಗಡಿಯಲ್ಲಿ ಆರಂಭಗೊಂಡು ಸಾಹಿತ್ಯದಲ್ಲಿ ಭಾರತೀಯತೆಯನ್ನು ಸ್ಥಾಪಿಸುವ, ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಪ್ರಯತ್ನವಾಗಿ ತಾಲೂಕಿನಲ್ಲಿ ಪ್ರತೀ ತಿಂಗಳು ಒಂದೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಗಟ್ಟಿ ಹೆಜ್ಜೆಯಾಗಿ ಈ ಅಧಿವೇಶನವು ಸಾಕ್ಷಿಯಾಗಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಎರಡು ಉಪನ್ಯಾಸಗಳಿದ್ದು ಒಂದು ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಎನ್ನುವ ವಿಷಯದಲ್ಲಿ ಯಕ್ಷಗಾನ ಕವಿ ಅರ್ಥದಾರಿ ದಿವಾಕರ ಹೆಗಡೆ ಹಾಗೂ ವಿದ್ಯಾರ್ಥಿಗಳಲ್ಲಿ ಸಾಹಿತ್ಯದೊಲವು ಎನ್ನುವ ವಿಷಯವನ್ನು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ತಾಲೂಕು ಹಾಗು ಜಿಲ್ಲೆಯ ಹೆಸರಾಂತ ಸಾಹಿತಿಗಳು, ವಿದ್ವಾಂಸರು ಭಾಗವಹಿಸಲಿದ್ದಾರೆ.

ಒಂದು ಅವಧಿಯು ಕವಿ ಸಮ್ಮಿಲನವಾಗಿದ್ದು ಇದರ ಅಧ್ಯಕ್ಷತೆಯನ್ನು ಕವಯಿತ್ರಿ, ತುಳು ಲಿಪಿ ಶಿಕ್ಷಕಿ, ತುಳುವೆರೆ ಕಲದ ಅಧ್ಯಕ್ಷೆ, ಗೀತಾ ಲಕ್ಷ್ಮೀಶ್‌ ವಹಿಸಿಕೊಳ್ಳಲಿದ್ದಾರೆ. ತಾಲೂಕಿನ ಕವಿಗಳಾದ ಅಶ್ವಿಜ ಶ್ರೀಧರ್, ಅರುಣಾ ಶ್ರೀನಿವಾಸ್, ಆಶಾ ಅಡೂರು, ವನಜಾ ಜೋಷಿ, ನಿಶಾ ಸಂತೋಷ್, ನಯನಾ ಟಿ., ಸಮ್ಯಕ್ತ ಜೈನ್, ವಿದ್ಯಾಶ್ರೀ ಅಡೂರು, ಸುಶಾಂತ್, ನಾಗಶ್ರೀ ದಾತೆ, ಸೋನಾಕ್ಷಿ, ವೃಂದಾ ತಾಮಣ್ಯರ್ ತಮ್ಮ ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ. ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಾಂತಾ ಜೆ.ಅಳದಂಗಡಿಯವರ ಸ್ವರಚಿತ ಕವನಗಳ ಸಂಕಲನ “ಕಾವ್ಯ ಯಾನ”, ಉಜಿರೆಯ ವಿನುತಾ ರಜತ್ ಗೌಡರವರ ಲೇಖನಗಳ ಗೊಂಚಲು “ಪ್ರತಿಬಿಂಬ”, ವಿದ್ಯಾರ್ಥಿಗಳು ಮತ್ತು ಹೊಸ ಬರಹಗಾರರಿಂದ ರಚಿಸಲ್ಪಟ್ಟ ಕವನಗಳ ಸಂಕಲನ “ಮೊದಲ ಹೆಜ್ಜೆ” ಈ ಮೂರು ಚೊಚ್ಚಲ ಕೃತಿಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಕೃತಿಗಳನ್ನು ಅನಾವರಣಗೊಳಿಸಲಿದ್ದಾರೆ.
ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮ ನಡೆಯಲಿದ್ದು, ಸಮಾರೋಪವನ್ನು ಲೇಖಕರೂ, ಅಂಕಣಕಾರರೂ ಆಗಿರುವ ಶಿವಪ್ರಸಾದ್ ಸುರ್ಯರವರು ಮಾಡಲಿದ್ದಾರೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯದರ್ಶಿ ಸುಭಾಷಿಣಿ, ಉಪಾಧ್ಯಕ್ಷರುಗಳಾದ ವಿಶ್ವೇಶ್ವರ ಭಟ್ ಉಂಡೆಮನೆ, ರಾಮಕೃಷ್ಣ ಭಟ್ ಬದನಾಜೆ ಉಪಸ್ಥಿತರಿದ್ದರು

p>

LEAVE A REPLY

Please enter your comment!
Please enter your name here