ಹೊಕ್ಕಾಡಿಗೋಳಿ ಶಾಲಾ ವಾರ್ಷಿಕೋತ್ಸವ

0

p>

ಆರಂಬೋಡಿ: ಸ. ಹಿ. ಪ್ರಾ. ಶಾಲೆ ಹೊಕ್ಕಾಡಿಗೋಳಿ ಶಾಲಾ ವಾರ್ಷಿಕೋತ್ಸವ ಡಿ. 13 ರಂದು ನಡೆಯಿತು. ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಧ್ವಜಾರೋಹಣ ನೆರವೇರಿಸಿದರು.

ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ದಿನೇಶ್ ಹುಲಿಮೇರು ಅಧ್ಯಕ್ಷತೆಯಲ್ಲಿ ಬೆಳಗ್ಗಿನ ಸಭಾ ಕಾರ್ಯಕ್ರಮವು ನೆರವೇರಿತು. ಈ ಸಂದರ್ಭದಲ್ಲಿ ನಿವೃತ ಮುಖ್ಯ ಶಿಕ್ಷಕ ಕೃಷ್ಣಪ್ಪ ಮಾಸ್ಟರ್, ರಾಜು ಪೂಜಾರಿ, ರುಕ್ಮಯ್ಯ ಪೂಜಾರಿ ಹಾಗೂ ಪ್ರಾ. ಶಾ. ಶಿ. ಕೋಶಾಧಿಕಾರಿ ರಾಜೇಶ್ ನೆಲ್ಯಾಡಿ ಇವರನ್ನು ಸನ್ಮಾನಿಸಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಸುಚಿತ್ರ, ಮೆಟಿಲ್ದಾ ಡಿಸೋಜ, ಶುಭವತಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿದರು.

ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಮೃತಿ ಯು, ಹೊಸಂಗಡಿ ಪಿ. ಡಿ. ಒ ಗಣೇಶ್ ಶೆಟ್ಟಿ, ರಮೇಶ್ ಮಂಜಿಲಾ, ಉದ್ಯಮಿ ಮನೋಜ್ ಕುಮಾರ್ ಬೆಂಗಳೂರು, ಉದ್ಯಮಿ ಕಿರಣ್ ಮಂಜಿಲಾ, ಶಿಕ್ಷಣ ಸಂಯೋಜಕ ಸಿದ್ದಲಿಂಗ ಸ್ವಾಮಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಖ್ಯ ಶಿಕ್ಷಕಿ ಸುಮಿತ್ರ ಎಸ್. ಸ್ವಾಗತಿಸಿ ಕುಮಾರಿ ಸುತಿಕ್ಷ ಧನ್ಯವಾದವಿತ್ತರು. ಸಿಲ್ವಿಯ ಮಿರಾಂದ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಭೇಟಿ ನೀಡಿ ಶುಭ ಹಾರೈಸಿದರು.

ಅಪರಾಹ್ನ ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮವು ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ ಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನೆರವೇರಿತು.

ಸಂದೀಪ್ ಶೆಟ್ಟಿ ಪೊಡುಂಬ ಅಧ್ಯಕ್ಷರು, ಕಂಬಳ ಸಮಿತಿ ಸಿದ್ಧಕಟ್ಟೆ ಕೊಡಂಗೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

1982 ರಲ್ಲಿ ಶಾಲೆಯ ಪ್ರಾರಂಭದ ಕಟ್ಟಡ ನಿರ್ಮಾಣ ಸಮಿತಿಯ ಸದಸ್ಯ ಹರೀಶ್ ಹಿಂಗಾಣಿ, ಆನಂದ ಬೃಂದಾವನ, ರಮೇಶ್ ಮಂಜಿಲ, ಲಕ್ಷ್ಮಿ ಕಾಂತರಬೆಟ್ಟು ಇವರನ್ನು ಅಭಿನಂದಿಸಲಾಯಿತು. ದುರ್ಗಾ ಪೂಜಾರಿ, ರಘು ಚಂದ್ರ ಅನುಪಸ್ಥಿತಿಯಲ್ಲಿ ಅವರ ಕುಟುಂಬದವರನ್ನು ಗೌರವಿಸಲಾಯಿತು.

ದಿ. ಜಾರಪ್ಪ ಪೂಜಾರಿ ಹಿಂಗಾಣಿ, ಅಬ್ಬಾಸ್ ಹೊಕ್ಕಾಡಿಗೋಳಿ, ಅಶೋಕ ಕುಮಾರ್ ಚೌಟ, ಆನಂದ ಹಿಂಗಾಣಿ, ಶಿವಪ್ಪ ಪೂಜಾರಿ, ವಾಸು ಪೂಜಾರಿ, ಚೀoಕ್ರ ಪೂಜಾರಿ, ಗಂಗಯ್ಯ ಶೆಟ್ಟಿಗಾರ್, ಅಣ್ಣು ಪೂಜಾರಿ ಕಾಂತರಬೆಟ್ಟು ಇವರ ನೆನಪಿಗಾಗಿ ಇವರ ಸಂಬಂಧಿಗಳನ್ನು ಗೌರವಿಸಲಾಯಿತು.

ಆರಂಬೋಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ತೇಜಸ್ವಿನಿ, ಸದಸ್ಯರಾದ ಪ್ರಭಾಕರ್ ಎಚ್, ಸುರೇಂದ್ರ ಉಪಸ್ಥಿತರಿದ್ದರು. ಜಗದೀಶ್ ಹೆಚ್. ಬಿ. ಐ. ಇ. ಆರ್. ಟಿ ಬೆಳ್ತಂಗಡಿ, ರಕ್ಷಣ್ ಮೇಲಂಟ, ಉದ್ಯಮಿ ಕೃಷ್ಣ ಕ್ರಷರ್ ಹನ್ನೆರಡು ಕವಲು, ಸುರೇಶ್ ಶೆಟ್ಟಿ ಅಧ್ಯಕ್ಷರು, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ಬಂಟ್ವಾಳ, ಶಿವಯ್ಯ ಎಸ್. ಎಲ್ ಅಧ್ಯಕ್ಷರು, ರೋಟರಿ ಕ್ಲಬ್ ಸಿದ್ದಕಟ್ಟೆ ಪಲ್ಗುಣಿ, ರಶ್ಮಿತ್ ಶೆಟ್ಟಿ ಅಧ್ಯಕ್ಷರು, ಹೊಕ್ಕಾಡಿಗೋಳಿ ಕಂಬಳ ಸಮಿತಿ, ಪ್ರಭಾಕರ ಪ್ರಭು ಅಧ್ಯಕ್ಷರು, ಸಿ. ಎ ಬ್ಯಾಂಕ್ ಸಿದ್ದಕಟ್ಟೆ, ನಿಶಿತ್ ಡಿ. ಹಿಂಗಾಣಿ ಸಾಫ್ಟ್ವೇರ್ ಪ್ರಾಜೆಕ್ಟ್ ಮ್ಯಾನೇಜರ್, ಜರ್ಮನಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.

ಶಾಲಾ ವಾರ್ಷಿಕೋತ್ಸವದ ಯಶಸ್ವಿಗೆ ಪಾಲುದಾರರಾದ ಶ್ವೇತಾ ಮನೋಜ್ ಪೂಜಾರಿ, ಎಸ್. ಮಹಮ್ಮದ್ ಟೋಟಲ್ ಕ್ಲೀನ್ ಲಾಂಡ್ರಿ ಸರ್ವಿಸ್, ಹೊಕ್ಕಾಡಿಗೋಳಿ, ವೀರ ವಿಕ್ರಮ ಜೋಡುಕರೆ ಕಂಬಳ ಸಮಿತಿ ಸಿದ್ದಕಟ್ಟೆ, ಕೊಡಂಗೆ ಗ್ರಾಮ ಪಂಚಾಯತ್ ಆರಂಬೋಡಿ, ರಾಜೀವಿ ನಾಗೇಶ್ ನಿಡ್ಯಾಲ, ಎಸ್. ಡಿ. ಎಂ. ಸಿ ಅಧ್ಯಕ್ಷ ದಿನೇಶ್ ಹುಲಿಮೇರು ಹಾಗೂ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ಇವರುಗಳನ್ನು ಅಭಿನಂದಿಸಲಾಯಿತು.

ಶಾಲಾ ಎಸ್‌. ಡಿ. ಎಂ. ಸಿ ಅಧ್ಯಕ್ಷ ದಿನೇಶ್ ಹುಲಿಮೇರು ಉಪಸ್ಥಿತರಿದ್ದು ಸಹಕರಿಸಿದರು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಮುಖ್ಯ ಶಿಕ್ಷಕಿ ಸುಮಿತ್ರ ಎಸ್. ಶಾಲಾ ವರದಿ ಮಂಡಿಸಿದರು. ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್ ಸ್ವಾಗತಿಸಿ, . ಶಿಕ್ಷಕಿಯರಾದ ಸುಚಿತ್ರ, ಮೆಟಿಲ್ದಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಎಸ್‌. ಡಿ. ಎಂ. ಸಿ ಉಪಾಧ್ಯಕ್ಷೆ ಶುಭವತಿ ವಂದಿಸಿದರು.

p>

LEAVE A REPLY

Please enter your comment!
Please enter your name here