


ಧರ್ಮಸ್ಥಳ: ಜೋಡುಸ್ಥಾನದ ನಿವಾಸಿ ರಾಮಣ್ಣರವರ ಪತ್ನಿ ಸುಮತಿ (50ವ) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಡಿ. 14ರಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಜೋಡುಸ್ಥಾನದ ಮನೆಯ ಕೋಣೆಯಲ್ಲಿ ಬಾಗಿಲು ತೆರೆಯದಿದ್ದಾಗ ಮನೆಯವರು ಅನುಮಾನಗೊಂಡು ನೋಡಿದಾಗ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ಸುಮತಿಯವರು ಗಂಡ, ಇಬ್ಬರು ಮಕ್ಕಳು, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.