


ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ತಂಗಡಿ ಇದರ 2025 ರ ಕ್ಯಾಲೆಂಡರ್ ನ್ನು ದಿನಾಂಕ ಡಿ.13 ಶುಕ್ರವಾರ ಸಂಜೆ 4. ಗಂಟೆಗೆ ಸಹಕಾರಿ ಸಂಘದಲ್ಲಿ ತಾಲೂಕಿನ ಹಿರಿಯ ಅಧಿಕಾರಿಗಳೂ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ತಾಲೂಕು ಅಭಿವೃದ್ಧಿ ಅಧಿಕಾರಿ ಪ್ರತಿಮಾ, ಸಹಕಾರಿ ಸಂಘದ ಅಧ್ಯಕ್ಷ ಡಾ. ಕೆ.ಜಯಕೀರ್ತಿ ಜೈನ್, ಆಡಳಿತ ಮಂಡಳಿ
ನಿರ್ದೇಶಕ ಚಂದ್ರಶೇಖರ್, ಪರಮೇಶ್, ಹರಿಪ್ರಸಾದ್, ವಾರಿಜ, ಪ್ರಶಾಂತ್ ಜೈ ನ್, ರಜಾಕ್, ಸಲಹೆಗಾರರಾದ ವಸಂತ ಸುವರ್ಣ, ಸುವರ್ಣ ಆರ್ಕೇಡ್ ಕಟ್ಟಡದ ಮಾಲಿಕರಾದ ನಾಣ್ಯಪ್ಪ ಪೂಜಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ ಜ್ಯೋತಿರಾಜ್, ವಿಶಾಲ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಡಾ ಕೆ. ಜಯಕೀರ್ತಿ ಜೈನ್ ಸ್ವಾಗತಿಸಿ, ಹರಿಪ್ರಸಾದ್ ವಂದನಾರ್ಪಣೆ ಮಾಡಿ, ವಸಂತ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.