ಕಾಜೂರು: ಇತಿಹಾಸ ಪ್ರಸಿದ್ಧ ಧಾರ್ಮಿಕ ಶ್ರದ್ದಾ ಕೇಂದ್ರ ಹಝ್ರತ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಆಡಳಿತ ಸಮಿತಿಯ ಸಹಕಾರದೊಂದಿಗೆ ಜಮಾಅತ್‌ನ ಧಾರ್ಮಿಕ – ಶರೀಅತ್ ವಿಷಯದಲ್ಲಿ ಕಾರ್ಯಾಚರಿಸುವ ಗುರಿಯೊಂದಿಗೆ ರಚನೆಗೊಂಡ ಕಾಜೂರು ಜಂಇಯ್ಯತುಲ್ ಉಲಮಾ ಸಮಿತಿಯನ್ನು ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರಾದ ಅಲ್ ಹಾಜಿ ಕೆ. ಎಮ್ ಉಮರ್ ಸಖಾಫಿ ಉಸ್ತಾದ್ ನೇತೃತ್ವದೊಂದಿಗೆ ಕಾಜೂರು ರಹ್ಮಾನಿಯಾ ಮಸೀದಿಯಲ್ಲಿ ಅಂಗೀಕಾರ ಮಾಡಲಾಯಿತು.
ಕಾಜೂರು ಜಂಇಯ್ಯತುಲ್ ಉಲಮಾ ಸಮಿತಿಯು ದೀನೀ ದಅವತ್ ಮಾಡಲು ಅನುಮತಿ ಹಾಗೂ ಅನುಮೋದನಾ ಸಭೆಯು ಡಿ. 5 ರಂದು ರಹ್ಮಾನಿಯಾ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಚೇರಿಯಲ್ಲಿ ನಡೆಯಿತು.
ಪ್ರಸ್ತುತ ಸಭೆಯಲ್ಲಿ ಕಾಜೂರು ದರ್ಗಾ ಸಮಿತಿಯ ಗೌರವಾನ್ವಿತ ಅಧ್ಯಕ್ಷ ಕೆ. ಯು ಇಬ್ರಾಹಿಂ ಮಾತನಾಡಿ, ಈ ಉಲಮಾ ಒಕ್ಕೂಟವು ಕಾಜೂರು ಕೇಂದ್ರ ಆಡಳಿತ ಸಮಿತಿಯ ಸಹಕಾರದಲ್ಲಿ ಕಾರ್ಯಾಚರಿಸುತ್ತಿದ್ದು, ಜಮಾಅತಿನ ಧಾರ್ಮಿಕ- ಶರೀಅತ್ ವಿಷಯದಲ್ಲಿ ಸಲಹೆ ಮತ್ತು ನಿರ್ದೇಶನಗಳನ್ನು ನೀಡಬೇಕೆಂದೂ, ಯಾವುದಾದರೂ ಸಮಸ್ಯೆ ಬರುವಾಗ ಉಲಮಾ- ಉಮರಾ ಜತೆಗೂಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿ ನೂತನ ಸಮಿತಿಗೆ ಶುಭ ಹಾರೈಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ. ಹೆಚ್., ಕೋಶಾಧಿಕಾರಿ ಮಹಮ್ಮದ್ ಕಮಾಲ್ ಹಾಗೂ ದರ್ಗಾ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ಜಂಇಯ್ಯತುಲ್ ಉಲಮಾ ನೂತನ ಸಮಿತಿ ಈ ಕೆಳಗಿನಂತಿವೆ ಗೌರವಾಧ್ಯಕ್ಷರು- ಅಲ್ ಹಾಜ್ ಕೆ. ಎಂ ಉಮರ್ ಸಖಾಫಿ ಕಾಜೂರು, ಅಧ್ಯಕ್ಷರು ಮುಹಮ್ಮದ್ ಬಶೀರ್ ಅಹ್ಸನಿ ಕಾಜೂರು, ಉಪಾಧ್ಯಕ್ಷರುಗಳು ಕೆ. ಯು. ಮಹಮ್ಮದ್ ಸಖಾಫಿ ಕಾಜೂರು, ಅಬ್ದುಲ್ಲತೀಫ್ ಮದದಿ ಕಾಜೂರು, ಪ್ರ.ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್ ಕುಕ್ಕಾವು, ಜೊತೆ ಕಾರ್ಯದರ್ಶಿಗಳು ಸವಾದ್ ಹಿಕಮಿ ದಿಡುಪೆ, ಮಹಮ್ಮದ್ ಫಾಳಿಲಿ ದಿಡುಪೆ, ಕೋಶಾಧಿಕಾರಿ ಹಮೀದ್ ಸಅದಿ ಕುಕ್ಕಾವು, ನಿರ್ದೇಶಕರು ಶಂಸುದ್ದೀನ್ ಝುಹ್ರಿ ಇಸ್ಮಾಯಿಲ್ ಮುಸ್ಲಿಯಾರ್ ದಿಡುಪೆ, ಸದಸ್ಯರು ಕೆ. ಕೆ.ಉಸ್ಮಾನ್ ಮುಸ್ಲಿಯಾರ್, ಕೆ. ಎಂ. ಹಕೀಂ ಮುಸ್ಲಿಯಾರ್, ಶರೀಫ್ ಸಅದಿ ದಿಡುಪೆ, ಅಲ್ಫಾಝ್ ಸಅದಿ ಕುಕ್ಕಾವು, ಶರ್ವಾನ್ ಸಅದಿ ಕಾಜೂರು.